Bhasaka
← Back to home

ಆವ ಕರ್ಮವೊ ಇದು ಆವ ಧರ್ಮವೊ

Author: ಕನಕದಾಸCategory: ಇತರೆRaaga: ಪಂತುವರಾಳಿTaala: ರೂಪಕತಾಳ
ಆವ ಕರ್ಮವೊ ಇದು ಆವ ಧರ್ಮವೊ ಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ ||ಪ|| ಸತ್ತವನು ಎತ್ತ ಪೋದ ಸತ್ತು ತನ್ನ ಜನ್ಮಕೆ ಪೋದ ಸತ್ತವನು ಉಣ್ಣುವನೆಂದು ನಿತ್ಯ ಪಿಂಡವಿಕ್ಕುತೀರಿ ||1|| ಎಳ್ಳು ದರ್ಭೆ ಕೈಲಿ ಪಿಡಿದು ಪಿತರ ತೃಪ್ತಿ ಪಡಿಸುತೀರಿ ಎಳ್ಳು ಮೀನು ನುಂಗಿ ಹೋಯಿತು ದರ್ಭೆ ನೀರೊಳು ಹರಿದು ಹೋಯಿತು ||2|| ಎಡಕೆ ಒಂದು ಬಲಕೆ ಒಂದು ಎಡಕೆ ತೋರಿಸಿ ಬಲಕೆ ತೋರಿಸಿ ಕಡು ಧಾವಂತ ಪಡಿಸಿ ಕಟಿಯ ಹಸ್ತದೊಳಗೆ ಪಿಡಿಸುತೀರಿ ||3|| ಮಂತ್ರಾಕ್ಷತೆಯ ಕೈಗೆ ಕೊಟ್ಟು ಮೋಕ್ಷವನ್ನು ಹಾರೈಸುವಿರಿ ಮಂತ್ರವೆಲ್ಲೊ ಅಕ್ಷತೆಯೆಲ್ಲೊ ಮೋಕ್ಷವೆಲ್ಲೊ ಮರ್ತ್ಯವೆಲ್ಲೊ ||4|| ಹೇಳುವವನು ಅವಿವೇಕಿ ಕೇಳುವವನು ಅಜ್ಞಾನಿ ಹೇಳುವ ಕೇಳುವ ಇಬ್ಬರ ಸೊಲ್ಲ ಆದಿಕೇಶವಮೂರ್ತಿ ಬಲ್ಲ ||5||

Thoughts & Reflections

0

No reflections shared yet. Be the first to share your thoughts!

Share your thought