Bhasaka
← Back to home

ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ

Author: ಕನಕದಾಸCategory: ಶ್ರೀಕೃಷ್ಣRaaga: ರೇಗುಪ್ತಿTaala: ತ್ರಿಪುಟತಾಳ
ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವು ರವೆಯಷ್ಟು ತೋರದಲ್ಲ ||ಪ|| ದೇವ ದೇವೇಶ ನೀನೆಂದು ನಂಬಿರಲು ಕೃ ಪಾವಲೋಕನದಿ ಸಲಹೊ ದೇವ ||ಅ|| ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾ ಸನವ ನಾನೆಂತ್ಹಾಸಲಿ ಘನವಾದ ಗಂಗೆಯನು ಪಡೆದವಗೆ ಕಲಶ ನೀ ರನದೆಂತು ಮೈಗೆರೆಯಲಿ ತನುವಿನ ಪರಿಮಳವು ಘಮಘಮಿಪನಿಗೆ ಸುಚಂ ದನವದೆಂತು ನಾ ಪೂಸಲಿ ಅನವರತ ನಾಭಿಯೊಳು ಶತಪತ್ರವಿಹಗೆ ಮಿ ಕ್ಕಿನ ಪೂವ ಮುಡಿಸಲೆಂತೈ ದೇವ ||1|| ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯ ಅರಿವೆಯೇನನು ಪೊದಿಸಲಿ ವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ ಭರಣವಾವುದ ತೊಡಿಸಲಿ ತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ ಪೆರತೊಂದು ದೀಪವಿಡಲಿ ನೆರಹಿದ ಫಣಿಪತಿಯ ಸ್ತೋತ್ರದೂರನ ನಾನು ಸ್ಮರಿಪೆನೆಂತಯ್ಯ ದೇವ ದೇವ ||2|| ವನಜಜಾಂಡ ಕೋಟಿಯುದರಂಗೆ ಆವುದನು ಉಣಿಸಿ ತೃಪ್ತಿಯ ಮಾಡಲಿ ಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ ರಿನೊಳೆಂತು ಸಂತವಿಡಲಿ ವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ ಸಣಿಗೆಯನ್ನೇಂ ಬೀಸಲಿ ಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ ಕ್ಷಿಣೆಯೆಂತು ಸುತ್ತಿಬರಲಿ ದೇವ ||3|| ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ ಳಿಗೆ ಕೊಡೆಯನೇಂ ಪಿಡಿಯಲಿ ಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ ತಗಳ ನಾನೇಂ ಪಾಡಲಿ ಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ ನ್ನುಗಳ ದಕ್ಷಿಣೆಯ ಕೊಡಲಿ ನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವ ಬಗೆಯ ನಾನರಿವೆನೆಂತೈ ದೇವ ||4|| ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ ಗಳುವ ಹೊಲಬ ನಾನರಿಯೆನು ತಿಳಿದುದಿಲ್ಲವು ಷೋಡಶೋಪಚಾರದ ಪೂಜೆ ಗಳಲೊಂದು ಪರಿಯಾದರೂ ನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ ಯೊಳಗೊಂದು ಬಗೆಯಾದರೂ ಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊ ನೆಲೆಯಾದಿ ಕೇಶವನೆ ಸ್ವಾಮಿ-ಪ್ರೇಮಿ ||5||

Thoughts & Reflections

0

No reflections shared yet. Be the first to share your thoughts!

Share your thought