Bhasaka
← Back to home

ಇದ್ದೀಯಾ ಶ್ರೀ ಹರಿ ನೀನೊಲಿದು

Author: ಕನಕದಾಸCategory: ಶ್ರೀಕೃಷ್ಣRaaga: ಶಂಕರಾಭರಣTaala: ಆಟತಾಳ
ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ||ಪ|| ಇದ್ದೀಯಾ ಶ್ರೀಹರಿ ನೀನು- ವೃದ್ಧಿ ಸಿದ್ಧಿಯ ನಡುವೆ ಪದುಮನಾಭನು- ಅಭಿ ವೃದ್ಧಿಯಾಗಲು ತಡವೇನು- ಅಹ ಬುದ್ಧಿಯಾಗಿ ಭಜಿಸುವ ಬಾಳುವೆಗೆ- ಸ ಮೃದ್ಧಿಯಾಗಿ ಸರ್ವ ಸಿದ್ಧಿಯ ಕೊಡಲಾಗಿ ||1|| ನಂಬಿದ್ದ ಸುಜನರು ಹರಿಯೆ- ಕೆಟ್ಟ ದೆಂಬ ಸುದ್ದಿಯ ನಾನರಿಯೆ- ಸತ್ಕು ಟುಂಬ ಎಂಬುದು ಹೊಸಪರಿಯೆ- ಅಹ ಬೆಂಬಲವಾಗಿ ಸಜ್ಜನರ ಸಲಹುವ- ಕೃ ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ ||2|| ಶೇಷಗಿರೀಶ ಮದ್ಬಂಧು- ಆದಿ ಕೇಶವ ಗುರುವೆ ನೀನೆಂದು- ಕೃಷ್ಣ ಕ್ಲೇಶ ಬಿನ್ನೈಸುವೆ ಇಂದು- ಅಹ ಆಸೆ ಬಿಟ್ಟು ಪೂಜಿಸುವ ಭಕ್ತರ ದಾಸನೆಂದು ವೆಂಕಟೇಶ ನೀನೊಲಿದು ಬಂದಿದ್ದೀಯಾ ||3||

Thoughts & Reflections

0

No reflections shared yet. Be the first to share your thoughts!

Share your thought