Bhasaka
← Back to home

ಇಷ್ಟು ದಿನ ಈ ವೈಕುಂಠ

Author: ಕನಕದಾಸCategory: ಶ್ರೀಕೃಷ್ಣRaaga: ರೇಗುಪ್ತಿTaala: ಆಟತಾಳ
ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪ|| ಎಂಟು ಏಳನು ಕಳೆದುದರಿಂದ ತುಂಟರೈವರ ತುಳಿದುದರಿಂದ ಕಂಟಕನೊಬ್ಬನು ಅಳಿದುದರಿಂದ ಭಂಟನಾಗಿ ಬಂದೆ ಶ್ರೀರಂಗಶಾಯಿ ||1|| ವನ ಉಪವನಗಳಿಂದ ಘನ ಸರೋವರಗಳಿಂದ ಕನಕ ಗೋಪುರಗಳಿಂದ ಘನಶೋಭಿತನೆ ಶ್ರೀರಂಗಶಾಯಿ ||2|| ವಜ್ರವೈಢೂರ್ಯ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ಕಂಡೆ ದುರ್ಜನಾಂತಕ ಶ್ರೀರಂಗಶಾಯಿ ||3|| ರಂಭೆ ಊರ್ವಶಿ ಮೇಳವ ಕಂಡೆ ತುಂಬುರು ನಾರದರ ಕಂಡೆ ಅಂಬುಜೋದ್ಭವ ಪ್ರಮುಖರ ಕಂಡೆ ಶಂಬರಾರಿ ಪಿತನೆ ಶ್ರೀರಂಗಶಾಯಿ ||4|| ನಾಗಶಯನನ ಮೂರುತಿ ಕಂಡೆ ಭೋಗಿ ಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಲವ ಕಂಡೆ ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||5||

Thoughts & Reflections

0

No reflections shared yet. Be the first to share your thoughts!

Share your thought

ಇಷ್ಟು ದಿನ ಈ ವೈಕುಂಠ | Bhasaka