Bhasaka
← Back to home

ಈತನೇನೆ ನಿನ್ನ ಮಗನು

Author: ಕನಕದಾಸCategory: ಶ್ರೀಕೃಷ್ಣRaaga: ಪಂತುವರಾಳಿTaala: ಛಾಪುತಾಳ
ಈತನೇನೆ ನಿನ್ನ ಮಗನು ||ಪ|| ಸೀತಾಪತಿ ರಘುನಾಥನೆಂಬವನು ||ಅ|| ವ್ಯಾಸನ ಜನನಿಯ ವಾಸನೆ ತಾಳ್ದನು ದೇಶದೊಳಗೆ ಬಲು ಪೆಸರುಳ್ಳವನು ನಾಸದೊಳೊರ್ವನ ಪೊತ್ತು ಮುರಿದು ಮು ನೀಶರ ಶಾಪವ ಪಿಡಿದು ಕೊಂದಾತನು ||1|| ಆನೆವಾಹನ ಪಿತನ ತಾಯನಳೆದೋನು ಭಾನುಸುತಗೆ ಶಾಪವಿತ್ತವನು ಕಾನನ ಜನನಿಯ ಕೊಂದು ಪ್ರಿಯದಲಿ ನಿ ಧಾನದಿ ಶರಧಿ ಶಯನ ಮಾಡಿದಾತನು ||2|| ಮೂಗ್ರಾಮ ಮುರಿದು ವಾಜಿಯನೇರಿದಾತನು ಸಾಗ್ರದಿಂದಿಳೆಯ ಭಾಗ್ಯ ಹಿಂಗಿಸಿದ ಯೊಗ್ಯದಿಂದ ಬಳಪತಿತನವನಿಗೆ ಭಾಗ್ಯವಿತ್ತ ಕಾಗಿನೆಲೆಯಾದಿಕೇಶವ ||3||

Thoughts & Reflections

0

No reflections shared yet. Be the first to share your thoughts!

Share your thought