Bhasaka
← Back to home

ಊರಿಗೆ ಬಂದರೆ ದಾಸಯ್ಯ

Author: ಕನಕದಾಸCategory: ಶ್ರೀಕೃಷ್ಣRaaga: ಪೂರ್ವೀTaala: ಆಟತಾಳ
ಊರಿಗೆ ಬಂದರೆ ದಾಸಯ್ಯ- ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ ||ಪ|| ಕೈಲಿ ಕೋಲು ಕೊಳಲು ದಾಸಯ್ಯ ಕಲ್ಲಿಗೆ ವರವಿತ್ತೆ ದಾಸಯ್ಯ ಮಲ್ಲನ ಮರ್ದಿಸಿ ಮಾವನ ಮಡುಹಿದ ನೀಲ ಮೇಘಶ್ಯಾಮ ದಾಸಯ್ಯ ||1|| ಕೊರಳೊಳು ವನಮಾಲೆ ದಾಸಯ್ಯ- ಬಲು ಗಿರಿಯನು ನೆಗಹಿದೆ ದಾಸಯ್ಯ ಇರುಳು ಹಗಲು ನಿನ್ನ ಕಾಣದೆ ಇರಲಾರೆ ಮರುಳು ಮಾಡುವಂಥ ದಾಸಯ್ಯ||2|| ಆದಿನಾರಾಯಣ ದಾಸಯ್ಯ ಮೋದದೊಂದು ಸಾಸಿರ ನಾಮದ ದಾಸಯ್ಯ ಮೇದನಿಯೊಳು ಪುಟ್ಟಿ ಗೋವ್ಗಳ ಕಾಯ್ದ ಆದಿಕೇಶವರಾಯ ದಾಸಯ್ಯ ||3||

Thoughts & Reflections

0

No reflections shared yet. Be the first to share your thoughts!

Share your thought