Bhasaka
← Back to home

ಎಂಥ ಟವಳಿಗಾರನಮ್ಮ

Author: ಕನಕದಾಸCategory: ಶ್ರೀಕೃಷ್ಣRaaga: ಮೋಹನTaala: ಝಂಪೆತಾಳ
ಎಂಥ ಟವಳಿಗಾರನಮ್ಮ ||ಪ|| ನಂದ ಗೋಪ್ಯಮ್ಮ ಕೇಳೆ- ನಿನ್ನ ಮಗ ಎಂಥ ಟವಳಿಗಾರನಮ್ಮ ||ಅ|| ಹಣವ ಕೊಟ್ಟೇನೆಂದು ಗುಣದಿಂದ ಎನ್ನ ತಂದ ಹಣವ ಕೇಳಿದರಲ್ಲಿ- ಹಣವೆ? ತಡೆಯಲಾರದ ತಲ್ಲಣವೆ? ಕುದುರೆ ಮೇಲಿನ ಪಲ್ಲಣವೆ? ಇಲ್ಲ, ಬಾಯಿಗಿಟ್ಟ ಬೊಕ್ಕಣವೆ?- ಹೋಗೆನುತಾನೆ ||1|| ಕೊಪ್ಪಾನೆ ಕೊಟ್ಟೇನೆಂದು ಒಪ್ಪಿಸಿ ಎನ್ನ ತಂದ ಕೊಪ್ಪಾನ ಕೇಳಿದರಲ್ಲಿ- ಕೊಪ್ಪ? ಊರಮುಂದಿನ ತಿಪ್ಪ? ಕೇರಿಯೊಳಗಿನ ಕೆಪ್ಪ? ಕೆರೆಯೊಳಗಿನ ಹುಳಿಸೊಪ್ಪ?- ಹೋಗೆನುತಾನೆ ||2|| ಬಳೆಯ ಕೊಟ್ಟೇನೆಂದು ಬಲು ಮಾತಿನಲಿ ತಂದ ಬಳೆಯ ಕೇಳಿದರಲ್ಲಿ- ಬಳೆಯೆ? ಊರ ಮುಂದಿನ ಗಳೆಯೆ? ಗದ್ದೆಯೊಳಗಿನ ಕಳೆಯೆ? ಕೈಕಾಲ ಹಿಡಿದು ಸೆಳೆಯೆ?- ಹೋಗೆನುತಾನೆ ||3|| ವಾಲೆಯ ಕೊಟ್ಟೇನೆಂದು ಒಲವಿನಿಂದ ತಂದ ವಾಲೆಯ ಕೇಳಿದರಲ್ಲಿ- ವಾಲೆ? ಕನ್ನಡಿಯ ಕಪೋಲೆ? ಹೇಳು ಸುವ್ವಿ ಸುವ್ವಾಲೆ? ನಿನ್ನ ಕಾಲಿಗೆ ಸಂಕೋಲೆ?- ಹೋಗೆನುತಾನೆ ||4|| ಕಡಗವ ಕೊಟ್ಟೇನೆಂದು ಸಡಗರದಿಂದ ತಂದ ಕಡಗ ಕೇಳಿದರಲ್ಲಿ- ಕಡಗ? ಅಂಬರದ ಗುಡುಗ? ಮುಂಗೈ ಮೇಲಿನ ಗಿಡುಗ? ಎತ್ತಿನ ಮ್ಯಾಲಿನ ಧಡಗ?- ಹೋಗೆನುತಾನೆ ||5|| ಬುಗುಡಿಯ ಕೊಟ್ಟೇನೆಂದು ರಗಡು ಕಿವಿಹಿಂಡಿ ತಂದ ಬುಗುಡಿ ಕೇಳಿದರಲ್ಲಿ- ಬುಗುಡಿ? ಪಾಂಡವರಾಡಿದ ಪಗಡಿ? ಮೂಗಿಂದ ಸುರಿವ ನೆಗಡಿ? ಛಿ! ನೀನೆಂಥ ಧಗಡಿ?- ಹೋಗೆನುತಾನೆ ||6|| ಆದಿಕೇಶವನ ಮೇಲೆ ಆಣೆಯಿಟ್ಟು ಕರೆತಂದ ಆಣಿ ಎಲ್ಲಹುದೆಂದು ತೋರ್ದ ಆನಂದದಿಂದಲಿ ಬೆರೆದ ಬೀದಿಗೆ ಬಂದು ಕರೆದ ಹೀಂಗೆ ಧರೆಯೊಳು ಮೆರೆದ- ಶ್ರೀ ಕೃಷ್ಣರಾಯ ||7||

Thoughts & Reflections

0

No reflections shared yet. Be the first to share your thoughts!

Share your thought