Bhasaka
← Back to home

ಎಲ್ಲಿ ನೋಡಿದರಲ್ಲಿ ರಾಮ

Author: ಕನಕದಾಸCategory: ಶ್ರೀರಾಮRaaga: ಪಂತುವರಾಳಿTaala: ಛಾಪುತಾಳ
ಎಲ್ಲಿ ನೋಡಿದರಲ್ಲಿ ರಾಮ- ಇದ ||ಪ|| ಬಲ್ಲ ಜಾಣರ ದೇಹದೊಳಗೆ ನೋಡಣ್ಣ ||ಅ|| ಕಣ್ಣೇ ಕಾಮನ ಬೀಜ- ಈ ಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯ ಕಣ್ಣಿನ ಮೂರುತಿ ಬಿಗಿದು- ಒಳ ಗಣ್ಣಿಂದಲೇ ದೇವರ ನೋಡಣ್ಣ ||1|| ಮೂಗೇ ಶ್ವಾಸ ನಿಶ್ವಾಸ- ಈ ಮೂಗಿಂದಲೇ ಕಾಣೊ ಯೋಗ ಸಂನ್ಯಾಸ ಮೂಗನಾದರೆ ವಿಶೇಷ- ಒಳ ಮೂಗಲಿ ನೋಡಣ್ಣ ಲೀಲಾವಿಲಾಸ ||2|| ಕಿವಿಯೇ ಕರ್ಮಕೆ ದ್ವಾರ- ಈ ಕಿವಿಯಿಂದಲೇ ಕೇಳೊ ಮೋಕ್ಷದ ಸಾರ ಕಿವಿಯೇ ಕರ್ಮ ಕುಠಾರ- ಒಳ ಗಿವಿಯಲ್ಲಿ ಕಾಣೊ ನಾದದ ಬೇರ ||3|| ಬೊಮ್ಮ ಮಾಡಿದ ತನುಬಿಟ್ಟು- ವಿಶ್ವ ಕರ್ಮನು ಮಾಡಿದ ಬೊಂಬೆಯನಿಟ್ಟು ಸುಮ್ಮನೆ ಕೂಗುಗಳಿಟ್ಟು- ಅದ ನೆಮ್ಮುವನೆಂಬೋನು ಹೋಹ ಕಂಗೆಟ್ಟು ||4|| ರೂಢಿಯೊಳಗೆ ಶುದ್ಧ ಮೂಡ- ಈ ಕಾಡುಕಲ್ಲುಗಳನ್ನು ನಂಬಬೇಡ ನಾಡಾಡಿ ದೈವಗಳನೆಲ್ಲ- ನಮ್ಮ ಬಡದಾದಿ ಕೇಶವನೊಬ್ಬನೆ ಬಲ್ಲ ||5||

Thoughts & Reflections

0

No reflections shared yet. Be the first to share your thoughts!

Share your thought