Bhasaka
← Back to home

ಎಷ್ಟು ಪ್ರೀತಿಯೊ ಮನಕೆ

Author: ಕನಕದಾಸCategory: ಶ್ರೀಕೃಷ್ಣRaaga: ಪಂತುವರಾಳಿTaala: ಆದಿತಾಳ
ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ ||ಪ|| ಇಷ್ಟವೆಂದು ತಿಳಿದು ಈ ಕಷ್ಟ ಸಂಸಾರ ಹೊರುವುದು ||ಅ|| ಹಸಿವು ತೃಷೆಯು ಶೋಕ ಮೋಹ ಅಸುವಗೊಂಬ ಜನನ ಮರಣ ವಿಷ ಸಮಾನವಾದ ಬಹಳ ವ್ಯಸನ ಮೆರವಣಿ ಮುಸುಕಿ ಕವಿವ ವ್ಯಾಘ್ರದಂತೆ ಅಡಗಿ ಮುಪ್ಪುಗೊಂಬ ರೋಗ ವಿಷಯದೊಳಗೆ ಕ್ಲೇಶಬಟ್ಟು ವಿಷಯದಿಚ್ಛೆ ಬಿಡದ ಮನಕೆ ||1|| ನೀರಗುಳ್ಳೆ ಎನಿಪ ಕಣ್ಣ ನೀರಜಾಕ್ಷಿ ಎಂದು ಮತ್ತೆ ಸೋರುವ ಜಘನ ಕರಿಯ ಕುಂಭ, ಸುರಿವ ಶ್ಲೇಷ್ಮದ ಮೋರೆ ಚಂದ್ರಬಿಂಬ, ಮಾಂಸವಿಕಾರವಾದ ಕುಚವ ಕನಕಕಲಶ ಸಾರವೆಂದು ನರಕರೂಪಿನ ನಾರಿಯರಿಗೆ ಭ್ರಮಿಸಿ ಬಾಳ್ವುದು ||2|| ಅಸ್ತಿ ಚರ್ಮ ರಕ್ತ ಮಾಂಸ ವಿಸ್ತರವಾದ ಹೇಯ ಮಧ್ಯಮೆ ವಸ್ತು ಏರುತಿಳಿಯುತುದಯ ಅಸ್ತಮಾನದಿ ರಕ್ತಕುಸುಮಗಂಧಮಾಲೆ ಕಸ್ತೂರಿಯನು ಪೂಸಿಕೊಂಡು ವಸ್ತ್ರ ಒಡೆವ ಇಟ್ಟು ಬಹಳ ಶಿಸ್ತು ನರಕಿಯೆನಿಸಿ ಮೆರೆವುದು ||3|| ಬೇಯದಿರುವ ಹಸಿಯ ಬಿಂದಿಗೆ ತೋಯ ಹಿಂಗುವಂತೆ ಸಾಕ್ಷಿ ಆಯುಷ್ಯವನರಿಯದಿರುವ ಕಾಯ ಸೌಖ್ಯದಿ ಆಯಾಸಪಟ್ಟು ಗಳಿಸಿದರ್ಥ ಹೇಯವೆನದೆ ಭೋಗಿಸುತ್ತ ಬಾಯ ಸವಿಯನುಂಡು ಕಡೆಗೆ ನಾಯ ಸಾವು ಸಾಯೊ ಬಾಳಿಗೆ ||4|| ಮನ್ನಿಸಿ ಗುರುಹಿರಿಯರುಕ್ತಿಯನ್ನು ಕೇಳದೆ ಕಿವುಡುಗೆಟ್ಟು ಜೊನ್ನೆಯ ತುಪ್ಪ ಅನ್ನ ಒಲ್ಲದೆ ಎಲುವು ಮಾಂಸವನ್ನು ತಿಂಬ ಕುನ್ನಿಯಾದೆನಯ್ಯ ಕೃಷ್ಣ ನಿನ್ನ ಮಾಯದೊಳು ಸಿಲ್ಕಿದ ಎನ್ನನುದ್ಧರಿಸೊ ಸುಪ್ರಸನ್ನ ಆದಿಕೇಶವ ||5||

Thoughts & Reflections

0

No reflections shared yet. Be the first to share your thoughts!

Share your thought