Bhasaka
← Back to home

ಏಕೆ ದಯವಿನಿತಿಲ್ಲ ಲೋಕಪಾವನ

Author: ಕನಕದಾಸCategory: ವೈರಾಗ್ಯRaaga: ಕಾಂಬೋಧಿTaala: ಝಂಪೆತಾಳ
ಏಕೆ ದಯವಿನಿತಿಲ್ಲ ಲೋಕಪಾವನ ಮೂರ್ತಿ ||ಪ|| ಬೇಕೆಂದು ನಿನ್ನ ಪಾದ ನಂಬಿದ ದಾಸನ ಮೇಲೆ ||ಅ|| ಎಡರಿಗಾಗುವರಿಲ್ಲ ಕಡನ ನಂಬುವರಿಲ್ಲ ಬಡವನೆಂದು ವಸ್ತ್ರವ ಕೊಡುವರಿಲ್ಲ ದೃಢದೊಳಿದ್ದರು ಬವಣೆ ಬಂದೊಡನೆ ಕಾಡುವುವು ಒಡೆಯ ಕಂಡೂ ಕಾಣದಿರುವುದುಚಿತವಲ್ಲ ||1|| ಮೊರೆಯ ಕೇಳುವರಿಲ್ಲ ಸಿರಿವಂತ ನಾನಲ್ಲ ಪರಮಾತ್ಮ ನಿನ್ನೊಳಗ ನಾನರಿತಿಲ್ಲ ಬೆರೆತುಕೊಂಡಿರಲು ಸಜ್ಜನರ ಗೆಳೆತನವಿಲ್ಲ ಪರಮಹಂಸನೆ ಹರಿಸೊ ಇಂಥ ಕೊರತೆಗಳೆಲ್ಲ ||2|| ನೀಲವರ್ಣದ ಲೋಲ ಕಾಲನವರಿಗೆ ಶೂಲ ಬಾಲ್ಯದಿ ಯಶೋದೆಯ ಹಾಲ ಸವಿದ ಗೋಪಾಲ ನಾಲಗೆಗೆ ನಿನ್ನ ವಿಶಾಲ ಅಷ್ಟಾಕ್ಷರಿಯನಿತ್ತು ಪಾಲಿಸೋ ಶ್ರೀಕಾಗಿನೆಲೆಯಾದಿ ಕೇಶವನೆ ||3||

Thoughts & Reflections

0

No reflections shared yet. Be the first to share your thoughts!

Share your thought