Bhasaka
← Back to home

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು

Author: ಕನಕದಾಸCategory: ಇತರೆRaaga: ಮುಖಾರಿTaala: ಆಟತಾಳ
ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು- ಜಗ ||ಪ|| ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ||ಅ|| ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿ ಅರೆಮತಿಯ ಕೊಂಕು ಮಾತುಗಳನಾಡಿ ಚರಣಕೆರಗದ ಮನುಜರಿರಬಾರದೆಂದೆನುತ ಮರ ಮುರಿದು ಒರಗಿ ಸಾಯಲಿ ಎಂದು ನಡುಗಿದೆಯ ||1|| ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿ ಹೆತ್ತವರ ನಿರ್ಬಂಧಕೊಳಗು ಮಾಡಿ ಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರ ಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ ||2|| ಕಳ್ಳತನವನು ಕಲಿತು ಕಾಲೋಚಿತವ ಕೇಳ್ದು ಸುಳ್ಳು ಮಾತುಗಳಾಡಿ ಒಡಲ ಪೊರೆದು ಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥ ಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯೆ ||3|| ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆ ಸಲೆ ಭಕ್ತಿಯಿಂ ವೇದ ಶಾಸ್ತ್ರವನೋದದೆ ಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾ ನೊಲಿದು ಹೊರಲಾರೆನೆಂದು ನಡುಗಿದೆಯ ||4|| ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತು ನರಕುರಿಗಳೆಲ್ಲರು ನಡೆಗೆಟ್ಟರೆಂದು ಗುರುವೆ ಕೇಳಯ್ಯ ಕನಕಪ್ರಿಯ ತಿರುಪತಿಯ ಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ ||5||

Thoughts & Reflections

0

No reflections shared yet. Be the first to share your thoughts!

Share your thought