Bhasaka
← Back to home

ಏನಿದೆತ್ತಣ ಬಯಕೆ ಎಲೊ

Author: ಕನಕದಾಸCategory: ವೈರಾಗ್ಯRaaga: ಮುಖಾರಿTaala: ಝಂಪೆತಾಳ
ಏನಿದೆತ್ತಣ ಬಯಕೆ ಎಲೊ ಮಂಕುಜೀವ ನೀನು ಅರಿತರೆ ಪೇಳು ನಿಜವನೆನಗೆ ||ಪ|| ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲು ನಂಟರೈವರು ಕೂಡಿ ಆಕ್ರಮಿಸುತಿಹರು ದಾಂಟುವುದು ಅಸದಳವೊ ಎರಡೊಂದು ಬಲೆಗಳಲಿ ಕಂಟಕದಿ ಬಲು ತಾಪದಿಂದ ಬಳಲುವರು ||1|| ಆರೆರಡು ದಂತಿಗಳು ದಾರಿಯೊಳು ನಿಂತಿಹವು ಆರು ಮೂರು ತುರಗಗಳು ದಾರಿಯನು ಕೊಡವು ಮೂರೆರಡನೀಡಾಡಿ ತೋರುವುದು ಎನ್ನಾಣೆ ಸಾರಿ ಏನೇನಹುದು ಎಂಬುದನು ನೋಡು ||2|| ಪರರನ್ನು ನಿಂದಿಸದೆ ಪರಯೋಗ್ಯ ನೀನಾಗಿ ಪರರ ಪಾಪಗಳ ನೀ ಕಟ್ಟಿಕೊಳದೆ ಪರಮಾತ್ಮ ಕಾಗಿನೆಲೆಯಾದಿಕೇಶವರಾಯ ಪರಹಿತಕೆ ಸಖನೆಂದು ಭಜಿಸೆಲೊ ಮನುಜ ||3||

Thoughts & Reflections

0

No reflections shared yet. Be the first to share your thoughts!

Share your thought