Bhasaka
← Back to home

ಏನು ಕಾರಣ ಬಾಯಿ ತೆರದಿ- ಪೇಳೆಲೊ

Author: ಕನಕದಾಸCategory: ಶ್ರೀನರಸಿಂಹRaaga: ಕಾಂಬೋಧಿTaala: ಆಟತಾಳ
ಏನು ಕಾರಣ ಬಾಯಿ ತೆರದಿ- ಪೇಳೆಲೊ ದಾನವಾಂತಕ ಅಹೋಬಲ ನಾರಸಿಂಹನೆ ||ಪ|| ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯ ನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೊ ಬಾಯ- ಭೂ ಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯ ಜಗವರಿಯೆ ಪೇರುರವಿರಿದ ಪ್ರಹ್ಲಾದ ವರದ ಅಹೋಬಲ ನಾರಸಿಂಹನೆ ||1|| ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯ ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ ಮಲೆತು ಮಾವನ ಕೊಂದು ನಿಂದೆ- ಇಂಥ ಇಳಿಯಬಾರದ ಭೂಮಿಗಿಳಿದ ನಾರಸಿಂಹ ||2|| ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯ ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ ಮಾರಪಿತ ಕಾಗಿನೆಲೆಯಾದಿಕೇಶವ ರಂಗ ಧೀರ ಶ್ರೀನಾಥ ಭವನಾಶ ಪೇಳೋ ಪೇಳು ಏತಕೆ ಅಹೋಬಲ ನರಸಿಂಹನೆ? ||3||

Thoughts & Reflections

0

No reflections shared yet. Be the first to share your thoughts!

Share your thought