Bhasaka
← Back to home

ಜಯ ಜಗದಂಬ ಮಾ

Category: ಶ್ರೀದೇವಿRaaga: ರಾಮಪ್ರಸಾದೀTaala: ಏಕತಾಲ
ಜಯ ಜಗದಂಬ ಮಾ ಜನನೀ ಶ್ಯಾಮಾ ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ || ಮಮ ಹೃದಯಕಮಲದಿ ವಾಸಿಸು ಮುದದಿ ಸದಾ ನಿನ್ನ ಪರಮಧ್ಯಾನ ಗೈವೆ ಹೃದಯದಿ | ನಿನ್ನ ಕಂದ ನಾನು ಕರೆಯುತಿಹೆ ಲಾಲಿಸೆನ್ನ ಹೇ ರಮಾ | ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ || ಪರಾಶಕ್ತಿರೂಪಿಣೀ ವಿಮುಕ್ತಿದಾಯಿನೀ ಪರಾಭಕ್ತಿಗಮ್ಯೇ ನೀನು ಭವತಾರಿಣೀ | ನಿನ್ನ ನಂಬಿ ಕರೆವೆ ನಮನಗೈವೆ ನಲಿದು ಬಾರೆ ಹೇ ರಮಾ | ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ ||

Thoughts & Reflections

0

No reflections shared yet. Be the first to share your thoughts!

Share your thought