Bhasaka
← Back to home

ಕಂಡೆ ನಾ ತಂಡ ತಂಡದ ಹಿಂಡು

Author: ಕನಕದಾಸCategory: ಶ್ರೀನರಸಿಂಹRaaga: ನಾಟಿTaala: ಝಂಪೆತಾಳ
ಕಂಡೆ ನಾ ತಂಡತಂಡದ ಹಿಂಡು ಹಿಂಡು ದೈವ ಪ್ರಪಂಚ- ರಿಪು ಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ||ಪ|| ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ ಹಿಡಿ ಹಿಡಿದು ಹಿರಣ್ಯಕನ ತೊಡೆಮೇಲೆ ಕೆಡಹಿದನ ||1|| ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು ನರ ನರವನು ತೆಗೆದು ನಿರ್ಗಳಿತ ಶೋಣಿತ ಸುರಿಯೆ ಹರಿಹರಿದು ಕರುಳ ಕೊರಳೊಳಿಟ್ಟವನ ||2|| ಪುರಜನರು ಹಾಯೆನಲು ಸುರರು ಹೂಮಳೆಗರೆಯೆ ತರತರದ ವಾದ್ಯ ಸಂಭ್ರಮಗಳಿಂದ ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ ಕರುಣಾಳು ಕಾಗಿನೆಲೆಯಾದಿಕೇಶವನ ||3||

Thoughts & Reflections

0

No reflections shared yet. Be the first to share your thoughts!

Share your thought