Bhasaka
← Back to home

ಕಂಡೆ ಶ್ರೀಹರಿ ದಿವ್ಯಪಾದ

Author: ಕನಕದಾಸCategory: ಶ್ರೀಕೃಷ್ಣRaaga: ಆನಂದ ಭೈರವಿTaala: ಆಟತಾಳ
ಕಂಡೆ ಶ್ರೀ ಹರಿ ದಿವ್ಯಪಾದ- ಬ್ರ ಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ ||ಪ|| ಸಿರಿಯು ಸೇವಿಪ ವರ ಪಾದ- ನಮ್ಮ ಗರುಡನಿಂದ ಹೊತ್ತು ತಿರುಗುವ ಪಾದ ತರಳ ಧ್ರುವನ ಕಾಯ್ದ ಪಾದ- ಮುನಿ ಸುರರು ನಮಿಸುವ ಲಲಿತ ಪಾದ ||1|| ಸರಸಿಜೋದ್ಭವ ವಂದ್ಯ ಪಾದ ಪುರಹರ ನಮಿತ ಪರಿಪೂರ್ಣ ಪಾದ ನರಗೆ ಸಾರಥಿಯಾದ ಪಾದ ಕೌರವ ಮೂಲ ಮುರಿದಿಟ್ಟ ಪಾದ ||2|| ದಿವಿಜರಾಜನಿಗೊಲಿದ ಪಾದ ಅವಿವೇಕಿ ದಾನವರ ಕೊಂದ ಪಾದ ಬುವಿ ಗಯಾಪುರ ಶ್ರೇಷ್ಠ ಪಾದ ಭವ ಹಿಂಗಿಪಾದಿಕೇಶವ ಪಾದ ||3||

Thoughts & Reflections

0

No reflections shared yet. Be the first to share your thoughts!

Share your thought