Bhasaka
← Back to home

ಕಷ್ಟ ತನುವಿನಲಿ ಹುಟ್ಟಿ

Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಆಟತಾಳ
ಕಷ್ಟ ತನುವಿನಲಿ ಹುಟ್ಟಿ ತೊಳಲುವಂಥ ಎಷ್ಟೆಂದು ತಾಳುವೆನೊ ಶ್ರೀರಂಗ ||ಪ|| ಅಷ್ಟರೊಳೆಂದೆನ್ನ ಅವಗುಣವೆಣಿಸದೆ ಕಷ್ಟ ಪಡಿಸುವುದೇನು ಶ್ರೀರಂಗ ||ಅ|| ನರಜನ್ಮವನು ಎತ್ತಿ ನರಕದೊಳಗೆ ಸುತ್ತಿ ಗುರಿ ಗೊತ್ತು ಕಾಣೆನಯ್ಯ ಶ್ರೀರಂಗ ಪರಮಪಾತಕನಾಗಿ ಹರಿ ನಿಮ್ಮ ಸ್ಮರಣೆಯನು ಮರೆದು ಪಾಮರನಾದೆ ಶ್ರೀರಂಗ ||1|| ಅತಿವೇಧೆಯಲಿ ಸತಿಸುತರೆಂಬ ಮಂದ ದು ರ್ಮತಿಗೆ ಮರುಳಾದೆನೊ ಶ್ರೀರಂಗ ಅತುಳ ಪ್ರಪಂಚಕ್ಕೆ ಹಿತನಾಗಿ ದುಷ್ಟ ಸಂ ಗತಿಯ ನಾನರಿದಿದ್ದೆನೊ ಶ್ರೀರಂಗ ||2|| ಮಿತಿಮೀರಿ ಮನ ಹರಿ ಪದವ ನೆನೆಯದೆ ಪರ ಸತಿಯರಿಗಳುಪಿದೆನೊ ಶ್ರೀರಂಗ ಕೃತಬುದ್ಧಿಯೊಳು ಉನ್ನತನಾಗಿ ತಾನೆರೆದು ಸ್ತುತಿ ಮಾಡಿಕೊಂಡಿದ್ದೆನೈ ಶ್ರೀರಂಗ ||3|| ಆಶಾಪಾಶಗಳೆಂಬ ದೇಹಕ್ಕೆ ಸಿಲ್ಕಿ ಸ ದ್ವಾಸನೆಯನು ಬಿಟ್ಟೆನು ಶ್ರೀರಂಗ ಮೋಸದಿಂದಾತ್ಮಘಾತುಕನಾಗಿ ಅಪರಾಧ ವೇಸೊಂದು ಮಾಡಿದೆನಯ್ಯ ಶ್ರೀರಂಗ ||4|| ಈಸಲಾರದೆ ಹೊಳೆಯಲಿ ಕಾಸಲಾರದೆ ಒಲೆಯಲಿ ಸೋಸುತ್ತ ಕುಳಿತಿಹೆನು ಶ್ರೀರಂಗ ವಾಸುಕಿ ಶಯನ ನೆಲೆಯಾದಿಕೇಶವ ನಿಮ್ಮಾಶ್ರಿತ ದಾಸರ ದಾಸನಯ್ಯ ಶ್ರೀರಂಗ ||5||

Thoughts & Reflections

0

No reflections shared yet. Be the first to share your thoughts!

Share your thought