Bhasaka
← Back to home

ಕಷ್ಟಪಟ್ಟರು ಇಲ್ಲ ಕಳವಳಿಸಿದರು ಇಲ್ಲ

Author: ಕನಕದಾಸCategory: ಶ್ರೀಕೃಷ್ಣRaaga: ಮೋಹನTaala: ಆಟತಾಳ
ಕಷ್ಟಪಟ್ಟರು ಇಲ್ಲ ಕಳವಳಿಸಿದರು ಇಲ್ಲ ಭ್ರಷ್ಟ ಮಾನವ ನಿನ್ನ ಹಣೆಬರೆಹವಲ್ಲದೆ ಇಲ್ಲ ||ಪ|| ಸಿರಿವಂತನ ಸ್ನೇಹವ ಮಾಡಿ ನಡೆದರು ಇಲ್ಲ ಪರಿಪರಿಯಲಿ ವಿದ್ಯೆಯ ಕಲಿತರಿಲ್ಲ ನರಿಯ ಬುದ್ಧಿಯಿಂದಲಿ ನಡೆದುಕೊಂಡರು ಇಲ್ಲ ಅರಿಯದೆ ಹಲವ ಹಂಬಲಿಸಿದರು ಇಲ್ಲ ||1|| ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲ ಕಂಡ ಕಂಡವರಿಗೆ ಕೈ ಮುಗಿದರಿಲ್ಲ ಗಂಡುಗತ್ತರಿಯನು ಕೊರಳಿಗಿಟ್ಟರು ಇಲ್ಲ- ಪ್ರ ಚಂಡನಾದರು ಇಲ್ಲ, ಪರಿಹಾಸ್ಯವೆಲ್ಲ ||2|| ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲ ಬೆಟ್ಟವನು ಕಿತ್ತು ತಂದಿಟ್ಟರಿಲ್ಲ ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ ಕೊಟ್ಟವರಿಗುಂಟು ಕೊಡದವರಿಗಿಲ್ಲ ||3||

Thoughts & Reflections

0

No reflections shared yet. Be the first to share your thoughts!

Share your thought