Bhasaka
← Back to home

ಕಾಡುವ ದುರಿತಗಳನು ಬಿಡಿಸೆಂದು

Author: ಕನಕದಾಸCategory: ವೈರಾಗ್ಯRaaga: ಕಾಂಬೋಧಿTaala: ಧೃವತಾಳ
ಕಾಡುವ ದುರಿತಗಳನು ಬಿಡಿಸೆಂದು ಬೇಡಿಕೊಂಬೆನೊ ದೇವ ನಾ ನಿನ್ನ ||ಪ|| ಅಡಿದಾಸನೆಂಬೋ ಎನಗೊಂದು ದೃಢ ಬುದ್ಧಿಯು ಇಲ್ಲದೆ ಮಡದಿ ಮಕ್ಕಳೆಂಬೊ ಕಡಲೊಳು ಮುಳುಗಿದೆ ಕಡೆ ಹಾಯಿಸೊ ಎನ್ನೊಡೆಯ ನೀನಾದಡೆ ||1|| ಆಸೆಗಳ ಆಧಿಕ್ಯದಿಂದೀ ಪರಿಯ ಯಮ ಪಾಶಕ್ಕೆ ಒಳಗಾದೆನೋ ಮೀಸಲೂಳಿಗವ ಮಾಡದೆಯೆ ಪರಿಪರಿಯ ಕ್ಲೇಶದಿಂದಲಿ ಗಾಸಿಗೊಂಡೆನಯ್ಯ ||2|| ಪಾಡುವೆನು ನಿನ್ನ ನಾಮ ಸೀತಾರಾಮ ಆಡುವೆನು ಮನದಣಿವ ತನಕ ಬೇಡಿಕೊಂಬೆನೊ ನಿನ್ನ ಭಕ್ತರ ಸೇವೆಯನು ಬಾಡದಾದಿ ಕೇಶವ ಭಕ್ತವತ್ಸಲನೆ ||3||

Thoughts & Reflections

0

No reflections shared yet. Be the first to share your thoughts!

Share your thought