Bhasaka
← Back to home

ಕುಲ ಕುಲ ಕುಲವೆನ್ನುತಿಹರು 

Author: ಕನಕದಾಸCategory: ಇತರೆRaaga: ಮಧ್ಯಮಾವತಿTaala: ಝಂಪೆತಾಳ
ಕುಲ ಕುಲ ಕುಲವೆನ್ನುತಿಹರು ||ಪ|| ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ ||ಅ|| ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವ ವಸುಧೆಯೊಳಗೆ ಭೂಸುರರುಣಲಿಲ್ಲವೆ ||1|| ಮೃಗಗಳ ಮೈಯಲಿ ಪುಟ್ಟಿದ ಕತ್ತುರಿಯ ತೆಗೆದು ಪೂಸುವರು ದ್ವಿಜರೆಲ್ಲರು ಒಗೆಯಿಂದ ನಾರಾಯಣನ್ಯಾವ ಕುಲ ಅಗಜವಲ್ಲಭನ್ಯಾತರ ಕುಲದವನು ||2|| ಆತ್ಮ ಯಾವ ಕುಲ ಜೀವ ಯಾವ ಕುಲ ತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯ ಆತ್ಮಾಂತರಾತ್ಮ ನೆಲೆಯಾದಿಕೇಶವನು ಆತನೊಲಿದ ಮೇಲೆ ಯಾತರ ಕುಲವಯ್ಯ ||3||

Thoughts & Reflections

0

No reflections shared yet. Be the first to share your thoughts!

Share your thought