Bhasaka
← Back to home

ಕೂಸನು ಕಂಡೀರ್ಯಾ ಸುಪ್ರ-ಹ್ಲಾದನ

Author: ಕನಕದಾಸCategory: ಶ್ರೀಕೃಷ್ಣ
ಕೂಸನು ಕಂಡೀರ್ಯಾ ಸುಪ್ರ-ಹ್ಲಾದನ ಕಂಡೀರ್ಯಾ ನಮ್ಮಕೂಸನು ಕಂಡೀರ್ಯಾ ರಾಕ್ಷಸ ಕುಲದಲಿ ಜನಿಸಿತು ಕೂಸುರಾಧಾಕೃಷ್ಣನ ಭಜಿಸಿತು ಕೂಸುರಾಗ ದ್ವೇಷಗಳ ಬಿಟ್ಟಿತು ಕೂಸುರಾಮ ಪಾದವ ನೆನೆಯುವ ಕೂಸು ||1|| ಘನ ಹರಿ ಕಂಬದಿ ತೋರಿತು ಕೂಸುಗಳಿಸಿತು ಕೃಷ್ಣನ ಪ್ರೇಮವ ಕೂಸುಘನ ಪಂಪಾಲಯದಿ ವಾಸಿಪ ಕೂಸುಗಣೆ ಗೋಪಾಲನ ಪ್ರೀತಿಯ ಕೂಸು||2|| ಪ್ರಸಿದ್ಧ ವ್ಯಾಸರಾಯರೆಂಬ ಕೂಸುಪ್ರವೀಣ ವಿದ್ಯೆಯೊಳೆನಿಸಿದ ಕೂಸುಪ್ರಹ್ಲಾದನೆಂಬುವ ಆಹ್ಲಾದ ಕೂಸುಪ್ರಸನ್ನ ಕಾಗಿನೆಲೆಯಾದಿಕೇಶವನ ಕೂಸು||3||

Thoughts & Reflections

0

No reflections shared yet. Be the first to share your thoughts!

Share your thought