Bhasaka
← Back to home

ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು

Author: ಕನಕದಾಸCategory: ಇತರೆRaaga: ಸೌರಾಷ್ಟ್ರTaala: ಆಟತಾಳ
ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು ನೆಂಪು ಬಲ್ಲವರು ಪೇಳಿ ||ಪ|| ಹಂಪೆಯ ವಿರೂಪಾಕ್ಷ ಲಿಂಗನಲ್ಲಿ ಝಂಪೆಯನಾಡುತಿಹದು ||ಅ|| ಆರು ತಲೆ ಹದಿನಾರು ಕಣ್ಣುಗಳುಂಟು ಮೂರು ಮೂರು ನಾಲಗೆ ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು ಸೇರಿತು ತೆಂಕಲಾಗೆ ||1|| ಬಲೆಯ ಬೀಸಿದರು ಸಿಕ್ಕದಾ ಮೃಗ ಜಲದೊಳು ತಾ ನಿಲ್ಲದು ನೆಲನ ಮೇಲಿರುವುದು ನಿಂತರೆ ಸಾವುದು ಕುಲದೊಳಗಾಡುತಿಹುದು ||2|| ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆ ಬೇರೆ ಬೇರೆನಬಹುದು ಚೆನ್ನಕೇಶವನಲ್ಲಿ ಕೃಪೆಯುಂಟಾದರೆ ಅಲ್ಲುಂಟು ಇಲ್ಲಿಲ್ಲವೆ ||3||

Thoughts & Reflections

0

No reflections shared yet. Be the first to share your thoughts!

Share your thought