Bhasaka
← Back to home

ಕೈಯ ತೋರಿದ ಬಗೆಯ

Author: ಕನಕದಾಸCategory: ಶ್ರೀಕೃಷ್ಣRaaga: ಶಂಕರಾಭರಣTaala: ಆಟತಾಳ
ಕೈಯ ತೋರಿದ ಬಗೆಯ, ಅಮ್ಮಮ್ಮ ಯಾದವಗಿರಿ ಕಲ್ಯಾಣಿ ನೀನು ಸಕಲ ಜನರು ಕಾಣುತಿರಲು ವಿಕೃತಿ ವತ್ಸರ ಚೈತ್ರ ದ್ವಿತೀಯೇಕಾದಶಿಯೊಳು ಪ್ರಕಟಿತಾ ಶುಕ್ರವಾರದೊಳು ತನ್ನ ಭಕುತರಿಗುತ್ಸಾಹ ಸಂಧ್ಯಕಾಲದೊಳು ||1|| ಕಡಗ ಕಂಕಣ ಗೀರುಗಂಧ ಮಿಗೆಕಡು ಚೆಲುವಿನ ಬಣ್ಣ ಕುಪ್ಪುಸದಿಂದನಡು ಬೆರಳುಂಗುರದಿಂದ ಕೈಯಬೆಡಗ ನೋಡಿದ ಜನರಿಗೆ ಪುಟ್ಟಿತಾನಂದ ||2|| ಜನರೆಲ್ಲ ಯದುಶೈಲೋತ್ಸವವ ಕೇಳಿ ಘನ ಕಾಲದೇಶದಜಿತ ಭಯವ ನಿಮಗೆ ಬಿನ್ನೈಪೆನು ನಯವ ಕೊಟ್ಟ ಮನೋಹರುಷದಿ ನಮಗಿತ್ತ ವೈಭವವ ||3|| ಚೆಲುವರಾಯನ ರಥೋತ್ಸವದೀ ತೀರ್ಥ ಕೊಲಿದು ಗಂಗಾದೇವಿ ಬರುವ ಸಂಭ್ರಮವ ನೆಲೆಯ ಸರ್ವರಿಗನುಭವವ ಕೋಟಿ ಮನೋಹರುಷವನ್ನು ನಮಗಿತ್ತ ವೈಭವವ ||4|| ನಿನ್ನ ಮೋಹದ ಕಂದ ನಾನೊ ಕೇಳೆ ನಿನ್ನೊಮ್ಮೆ ದಿವ್ಯ ಹಸ್ತಂಜವನೀವ ಚೆನ್ನಿಗ ವರದ ವೆಂಕಟಾದಿಕೇಶವನು ತನ್ನ ನಂಬಿದ ಭಕ್ತರಾಶ್ರಿತ ಕಾಮಧೇನು ||5||

Thoughts & Reflections

0

No reflections shared yet. Be the first to share your thoughts!

Share your thought