Bhasaka
← Back to home

ಕೊಡಲು ನೀನಾರು ಬಿಡಲು ನೀನಾರು

Author: ಕನಕದಾಸCategory: ಶ್ರೀಕೃಷ್ಣ
ಕೊಡಲು ನೀನಾರು ಬಿಡಲು ನೀನಾರು ಪೊಡವಿಗೊಡೆಯ ಶ್ರೀಹರಿಲೀಲೆಯದು ||ಪ|| ಮಾಡಲು ನೀನಾರು ಮಾಡೆನಲು ನೀನಾರು ಮಾಡದವರಿಂದ ಮಾಡಿಪ ಮೋಡಿರೂಪ ಮಾಡಬೇಕೆಂಬರ ತಡೆದು ಕಾಡಿಪನವನು ಹಿಡಿಗೆ ಅಡಗದಾ ಹಿರಣ್ಯಗರ್ಭನವನಿರೆ ||1|| ಪಾಡುವ ಪದ್ಯಗಳಲಿ ಭಾವವಾಗಿರುವ ನೋಡುವ ನೋಟಗಳ ನೋವು ಗ್ರಹಿಸುವ ನುಡಿವ ನುಡಿಯ ತಾತ್ಪರ್ಯವನರಿವ ನಾಡಿ ನರಗಳಂತೊಲಿವ ಆದಿಕೇಶವರಾಯ ||2||

Thoughts & Reflections

0

No reflections shared yet. Be the first to share your thoughts!

Share your thought