Bhasaka
← Back to home

ಗೋವಿಂದ ಹರಿ ಗೋವಿಂದ

Author: ಕನಕದಾಸCategory: ಶ್ರೀಕೃಷ್ಣRaaga: ಪೂರ್ವೀTaala: ಆಟತಾಳ
ಗೋವಿಂದ ಹರಿ ಗೋವಿಂದ ||ಪ|| ಗೋವಿಂದ ಪರಮಾನಂದ ಮುಕುಂದ ||ಅ|| ಮಚ್ಛ್ಯಾವತಾರದೊಳಾಳಿದನೆ- ಮಂದ ರಾಚಲ ಬೆನ್ನೊಳು ತಾಳಿದನೆ ಅಚ್ಛ ಸೂಕರನಾಗಿ ಬಾಳಿದನೆ- ಮದ ಹೆಚ್ಚೆ ಹಿರಣ್ಯಕನ ಸೀಳಿದನೆ ||1|| ಕುಂಭಿನಿ ದಾನವ ಬೇಡಿದನೆ- ಕ್ಷಾತ್ರ ರೆಂಬುವರನು ಹತ ಮಾಡಿದನೆ ಅಂಬುಧಿಗೆ ಶರ ಹೂಡಿದನೆ- ಕಮ ಲಾಂಬಕ ಗೊಲ್ಲರೊಳಾಡಿದನೆ ||2|| ವಸುದೇವನುದರದಿ ಪುಟ್ಟಿದನೆ- ಪಲ್ ಮಸೆವ ದನುಜರೊಡೆಗುಟ್ಟಿದನೆ ಎಸೆವ ಕಾಳಿಂಗನ ಮೆಟ್ಟಿದನೆ- ಬಾ ಧಿಸುವರ ಯಮಪುರಕಟ್ಟಿದನೆ ||3|| ಪೂತನಿಯ ಮೈ ಸೋಕಿದನೆ- ಬಲು ಘಾತದ ಮೊಲೆಯುಂಡು ತೇಕಿದನೆ ಘಾತಕಿಯನತ್ತ ನೂಕಿದನೆ- ಗೋಪ ವ್ರಾತ ಗೋಗಳನೆಲ್ಲ ಸಾಕಿದನೆ ||4|| ಸಾಧಿಸಿ ತ್ರಿಪುರರ ಗೆಲಿದವನೆ- ಮ್ಲೇಚ್ಛರ ಛೇದಿಸೆ ಹಯವೇರಿ ಕೆಲೆದವನೆ ಸಾಧುಸಂತರೊಡನೆ ನಲಿದವನೆ- ಬಾಡ ದಾದಿಕೇಶವ ಕನಕಗೊಲಿದವನೆ ||5||

Thoughts & Reflections

0

No reflections shared yet. Be the first to share your thoughts!

Share your thought