Bhasaka
← Back to home

ತಾನ್ಯಾರು ತನ್ನ ದೇಹವ್ಯಾರು

Author: ಕನಕದಾಸCategory: ಶ್ರೀಕೃಷ್ಣRaaga: ರೇಗುಪ್ತಿTaala: ಝಂಪೆತಾಳ
ತಾನ್ಯಾರು ದೇಹವ್ಯಾರು - ದಿವ್ಯ ಜ್ಞಾನದಲಿ ತಿಳಿದಾತ ಪರಮಯೋಗಿ ||ಪ|| ಸೂತಿಕಾವಸ್ಥೆಯಲಿ ನವಮಾಸ ನೆರೆದಾಗ ಮಾತೆಯುದರದಿ ಬಂದು ಬೆಳೆದು ನಿಂದು ಪಾತಕವದೊಂದು ಮೂರುತಿಯಾದ ತನುವೆಂದು ನೀತಿಯಲಿ ತಿಳಿದಾತ ಪರಮಯೊಗಿ ||1|| ಅಸ್ಥಿಪಂಜರದ ನರಗಳ ತೊಗಲಿನ ಹೊದಿಕೆಯ ವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯು ರಕ್ತ ಮಲ ಮೂತ್ರ ಕೀವಿನ ಪ್ರಳಯದೊಡಲೆಂದು ಸ್ವಸ್ಥದಿಂ ತಿಳಿದಾತ ಪರಮಯೋಗಿ ||2|| ಘೋರ ನರಕದ ತನುವು ಎಂದು ಮನದಲಿ ತಿಳಿದು ಗೇರು ಹಣ್ಣಿನ ಬೀಜದಂತೆ ಹೊರಗಿದ್ದು ಮಾರಪಿತ ಕಾಗಿನೆಲೆಯಾದಿಕೇಶವನ ಪಾದ ವಾರಿಜವ ನೆನೆದವನೆ ಪರಮಯೋಗಿ ||3||

Thoughts & Reflections

0

No reflections shared yet. Be the first to share your thoughts!

Share your thought