Bhasaka
← Back to home

ಜಯ ಜಾನಕೀಕಾಂತ

Author: ಪುರಂದರದಾಸCategory: ಶ್ರೀರಾಮRaaga: ಯಮನ್Taala: ಝಪತಾಲ
ಜಯ ಜಾನಕೀಕಾಂತ ಜಯ ಸಾಧುಜನವಿನುತ | ಜಯತು ಮಹಿಮಾವಂತ ಜಯ ಭಾಗ್ಯವಂತ || ದಶರಥಾತ್ಮಜ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ | ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ ಆಸಮಸಾಹಸಶಿಕ್ಷ ಅಂಬುಜದಳಾಕ್ಷ || ಸಾಮಗಾನಲೋಲ ಸಾಧುಜನಪರಿಪಾಲ ಕಾಮಿತಾರ್ಥವಿದಾತ ಕೀರ್ತಿಸಂಜಾತ | ಸೋಮಸೂರ್ಯಪ್ರಕಾಶ ಸಕಲ ಲೋಕಾಧೀಶ ಶ್ರೀಮಹಾರಘುವೀರ ಸಿಂಧುಗಂಭೀರ || ಸಕಲಶಾಸ್ತ್ರವಿಚಾರ ಶರಣಜನಮಂದಾರ ವಿಕಸಿತಾಂಬುಜವದನ ವಿಶ್ವಮಯಸದನ | ಸುಕೃತಮೋಕ್ಷಾಧೀಶ ಸಾಕೇತಪುರವಾಸ ಭಕ್ತವತ್ಸಲರಾಮ ಪುರಂದರವಿಟ್ಠಲ ||

Thoughts & Reflections

0

No reflections shared yet. Be the first to share your thoughts!

Share your thought