Bhasaka
← Back to home

ತಾಳಲ್ಲಲ್ಲಲ್ಲಲ್ಯೊ ಮಾಸಾಳಲ್ಲಲ್ಲಲ್ಲಲ್ಯೋ

Author: ಕನಕದಾಸCategory: ಶ್ರೀಕೃಷ್ಣRaaga: ನಾದನಾಮಕ್ರಿಯೆTaala: ಆಟತಾಳ
ತಾಳಲ್ಲಲ್ಲಲ್ಲಲ್ಯೊ ಮಾಸಾಳಲ್ಲಲ್ಲಲ್ಲಲ್ಯೋ ||ಪ|| ಹೆಚ್ಚಿದ ತಮನೆಂಬ ದನುಜ ವೇದವ ಕದ್ದು ಬಚ್ಚಿಟ್ಟು ನೀರೊಳು ಮುಳುಗಿರಲು ಮಚ್ಚ ರೂಪದಿಂದ ಪೋಗಿ ಅವನ ಕೊಂದ ಅಚ್ಯುತರಾಯನೆಂಬ ಮಾಸಾಳಮ್ಮ ||1|| ಸಿಂಧು ಮಥನವ ಮಾಡೆ ಅಮರರೆಲ್ಲರು ಮಂದರಗಿರಿ ನೀರೊಳು ಮುಳುಗಲು ಚಂದದಿ ಕೂರ್ಮ ರೂಪಿನಿಂದೆತ್ತಿದ ಗೋ ವಿಂದನೆಂಬುವ ಮಾಸಾಳಮ್ಮ ||2|| ರೂಢಿಯ ಕದ್ದುಕೊಂಡೋಡುವ ದೈತ್ಯನ ನೀಡಿ ತಿವಿದು ಕೋರೆದಾಡೆಯಿಂದ ದೂಡಿ ದ್ವಂಸವ ಮಾಡಿ ರೂಢಿಯ ತಂದ ಕಾಡು ವರಾಹ ರೂಪಿ ಮಾಸಾಳಮ್ಮ ||3|| ಲೇಸು ತಪ್ಪಿದನೆಂದು ಹಿರಣ್ಯಕ ತನಯನ ಘಾಸಿ ಮಾಡಲು, ಕಂಬ ಒಡೆದುದಿಸಿ ರೋಷದಿ ದೈತ್ಯನ ಕರುಳ ಕಿತ್ತ ನರ ಕೇಸರಿ ರೂಪಿನ ಮಾಸಾಳಮ್ಮ ||4|| ಆ ಮಹಾಸಿರಿಯ ಗರ್ವದಿ ಮುಂದರಿಯದೆ ಭೂಮಿಯನು ಬಲಿ ತಾನಾಳುತಿರೆ ನೇಮಿಸಿ ಎರಡೇ ಹೆಜ್ಜೆಯೊಳಳಕೊಂಡ ವಾಮನ ರೂಪಿನ ಮಾಸಾಳಮ್ಮ ||5|| ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನ ಆ ಮಹಾಮುನಿಯ ಪ್ರಾಣಕೆ ಮುನಿಯೆ ತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದ ರಾಮ ಭಾರ್ಗವನೆಂಬ ಮಾಸಾಳಮ್ಮ ||6|| ಜನಕ ಸುತೆಯನು ಕದ್ದೊಯ್ಯಲು ಲಂಕೆಗೆ ಗಣಿತಾತೀತ ಶರಧಿಯ ಕಟ್ಟಿ ಘನ ಕೋಪದಿ ದಶಿಶಿರನ ಕತ್ತರಿಸಿದ ಇನಕುಲ ರಾಮನೆಂಬ ಮಾಸಾಳಮ್ಮ ||7|| ದೇವಕಿ ಬಸುರೊಳು ಬಂದು ಗೋಕುಲದಿ ಆವ ಕಾವ ಗೊಲ್ಲರ ಸಲಹಿ ಮಾವನ ಕೊಂದು ಮತ್ತೈವರ ಸಲಹಿದ ದೇವ ಕೃಷ್ಣನೆಂಬ ಮಾಸಾಳಮ್ಮ ||8|| ಪತಿವ್ರತೆಯರ ವ್ರತವಳಿಯಬೇಕೆನುತಲಿ ಅತಿಶಯದಿ ತ್ರಿಪುರದ ಸ್ತ್ರೀಯರ ನುತ ಬೌದ್ಧ ರೂಪದಿ ಬಹು ಭಂಗಪಡಿಸಿದ ರತಿಪತಿಪಿತನೆಂಬ ಮಾಸಾಳಮ್ಮ ||9|| ಖುಲ್ಲ ಮನುಜರನು ಕೊಲ್ಲಬೇಕೆನುತಲಿ ಭಲ್ಲೆ ಹಿಡಿದು ತುರಗವನೇರಿ ಅಲ್ಲಲ್ಲೆ ಸೊಲ್ಲಡಗಿಸಿ ವಲ್ಲಭನೆನಿಸಿದ ಬಲ್ಲಿದ ಕಲ್ಕಿಯೆಂಬ ಮಾಸಾಳಮ್ಮ ||10|| ಮಂಗಳ ಮಹಿಮ ಭುಜಂಗ ಶಯನ ಕಾ ಳಿಂಗ ಮರ್ದನ ದೇವೋತ್ತುಂಗ ಅಂಗಜಪಿತ ನೆಲೆಯಾದಿಕೇಶವ ಅಂತ ರಂಗದೊಳಿರುವ ಮಾಸಾಳಮ್ಮ ||11

Thoughts & Reflections

0

No reflections shared yet. Be the first to share your thoughts!

Share your thought