Bhasaka
← Back to home

ತೊರೆದು ಜೀವಿಸುಬಹುದೆ ಹರಿ

Author: ಕನಕದಾಸCategory: ಶ್ರೀಕೃಷ್ಣRaaga: ಕೇದಾರಗೌಳTaala: ಝಂಪೆತಾಳ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ || ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು ದಾಯಾದಿ ಬಂಧುಗಳ ಬಿಡಲು ಬಹುದು ರಾಯ ಮುನಿದರೆ ರಾಜ್ಯವನೆ ಬಿಡಬಹುದು ಕಾಯಜಪಿತ ನಿನ್ನಡಿಯ ಬಿಡಲಾಗದು ||೧|| ಒಡಲು ಹಸಿದರೆ ಅನ್ನವನೆ ಬಿಡಬಹುದು ಪಡೆದ ಕ್ಷೇತ್ರವ ಬಿಟ್ಟು ಹೊರಡ ಬಹುದು ಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದು ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದು ||೨|| ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದು ಮಾನಾಭಿಮಾನವ ತಗ್ಗಿಸಬಹುದು ಪ್ರಾಣದಾಯಕನಾದ ಆದಿಕೇಶವರಾಯ ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು ||೩||

Thoughts & Reflections

0

No reflections shared yet. Be the first to share your thoughts!

Share your thought