Bhasaka
← Back to home

ದಾಸ ಪಟ್ಟವೋ ಸನ್ಯಾಸ ಪಟ್ಟವೋ

Author: ಕನಕದಾಸCategory: ಇತರೆRaaga: ಕಲ್ಯಾಣೀTaala: ಆಟತಾಳ
ದಾಸ ಪಟ್ಟವೋ ಸನ್ಯಾಸ ಪಟ್ಟವೋ ||ಪ|| ಆಸೆಯಿಂದ ನೆಲೆಯಾದಿಕೇಶವನ್ನ ನೆನೆಯದವಗೆ ||ಅ|| ಮಂಡೆ ಬೋಳು ಮಾಡಿ ನಾಮ ದುಂಡೆಯನ್ನು ಬರೆದು ಕೆಡಿಸಿ ಕಂಡ ಕಂಡವರನು ಕೂಡಿ ಭಂಡಜನ್ಮ ಹೊರೆಯುವವಗೆ ||1|| ಅವರವರ ಕೈಯ ನೋಡಿ ಹ ಲವು ಕೆಲವು ಮಾತನಾಡಿ ಹಲವು ಹಂಬಲಿಸಿ ದಿನವ ಕಳೆದು ಉಳಿದು ಬಾಳುವಗೆ ||2|| ಬೆಂದ ಸಂಸಾರವೆಂಬ ಬಂಧನದೊಳಗೆ ಸಿಲುಕಿಕೊಂಡು ಚೆಂದಾದಿಕೇಶವನ್ನ ಒಂದು ಬಾರಿ ನೆನೆಯದವಗೆ ||3||

Thoughts & Reflections

0

No reflections shared yet. Be the first to share your thoughts!

Share your thought