Bhasaka
← Back to home

ದಾಸನಾಗಬೇಕು ಸದಾಶಿವನ ದಾಸನಾಗಬೇಕು

Author: ಕನಕದಾಸCategory: ಶ್ರೀಕೃಷ್ಣ
ದಾಸನಾಗಬೇಕು ಸದಾಶಿವನ ದಾಸನಾಗಬೇಕು ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ಮನದ ಕಲ್ಮಷ ಕಳೆದು - ಮಹಾದೇ-ವನ ಮಹಿಮೆಯ ತಿಳಿದುಇನಿತು ಈ ಜಗವೆಲ್ಲ ಈಶ್ವರಮಯವೆಂದುಘನವಾದ ಮೋಹದ ಗಡಿಯನು ದಾಟುತ ||1|| ತನುವು ಅಸ್ಥಿರವೆನುತ - ತಿಳಿದು ಶಂಕರನ ಹೃದಯವ ಕಾಣುತಘನವಾದ ಇಂದ್ರಜಾಲವ ಮಾಯೆಯೆನುತಬಿನುಗು ಸಂಸಾರದ ಮಮತೆಯ ಬಿಡುತ ||2|| ಆರು ಚಕ್ರದಿ ಮೆರೆವ - ಅಖಂಡನಮೂರು ಗುಣವ ತಿಳಿದುಆರು ಮೂರು ಹದಿನಾರು ತತ್ತ್ವವ ಮೀರಿತೋರುವ ಕಾಗಿನೆಲೆಯಾದಿಕೇಶವನಡಿ ||3||

Thoughts & Reflections

0

No reflections shared yet. Be the first to share your thoughts!

Share your thought