Bhasaka
← Back to home

ದಾಸಾರ್ಯರ ದಾಸರ ದಾಸ ನಾನು

Author: ಕನಕದಾಸCategory: ಶ್ರೀಕೃಷ್ಣRaaga: ಸೌರಾಷ್ಟ್ರTaala: ಆದಿತಾಳ
ದಾಸಾರ್ಯರ ದಾಸರ ದಾಸ ನಾನು- ಬಾಢ ದೀಶ ಕಾಯ್ದುಕೊಳ್ಳೊ ||ಪ|| ಗುಟ್ಟು ಮಾಡಿಕೊಂಡಿರದೆ ಕಂಡವರಿಗೆ ಕಾರ್ಪಣ್ಯ ಪಟ್ಟು ಬಡವನಾದೆನಲ್ಲ- ಅಯ್ಯ ಕೈ ಗೊಟ್ಟು ರಕ್ಷಿಸುವರಿಲ್ಲ ಜನ್ಮ ಜನ್ಮಂಗಳಲಿ ಪುಟ್ಟುವಂತೆ ಮಾಡಬೇಡ ಮಾಧವ ಮನ್ನಿಸೊ ಎನ್ನ ||1|| ಮಡದಿ ಮಕ್ಕಳೆಂಬ ಪಾಶ ಮಮತೆ ಎನ್ನ ಕೊರಳ ಬಿಡದೆ ಸುತ್ತಿಕೊಂಡಿತಲ್ಲಯ್ಯ ಪಡೆದ ದ್ರವ್ಯವೆಲ್ಲ ವಸ್ತು ಕ್ಷೇತ್ರಂಗಳ ಕಾಣದೆ ನಿತ್ಯ- ನಡೆದುದ ವಿಸ್ತರಿಸಲಾರೆ ನೀಲಮೇಘಶ್ಯಾಮ ನಿನ್ನ ||2|| ಘೋರ ಸಂಸಾರವೆಂಬ ವಾರಿಧಿಯೊಳಗೆ ಬಿದ್ದು ಪಾರಗಾಣದವನಾದೆನಲ್ಲಯ್ಯ ಧೀರ ಕರ್ತನಾದ ಬಾಡದಾದಿಕೇಶವೇಶ ಸರ್ವ ಸಾರಿದೆ ಸಲಹೊ ಎನ್ನುದ್ಧಾರಿ ಮುದ್ದು ಕೃಷ್ಣ ನಿನ್ನ ||3||

Thoughts & Reflections

0

No reflections shared yet. Be the first to share your thoughts!

Share your thought