Bhasaka
← Back to home

ಅಲ್ಲಿದೆ ನಮ್ಮನೆ

Author: ಪುರಂದರದಾಸCategory: ಶ್ರೀಕೃಷ್ಣRaaga: ಪೂರ್ವಿಕಲ್ಯಾಣಿTaala: ತೇವರಾ
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ || ಕದ ಬಾಗಿಲಿರಿಸಿದ ಕಳ್ಳಮನೆ - ಇದು ಮುದದಿಂದ ಲೋಲಾಡೊ ಸುಳ್ಳುಮನೆ | ಇದಿರಾಗಿ ವೈಕುಂಠವಾಸ ಮಾಡುವಂಥ ಪದುಮನಾಭನ ದಿವ್ಯ ಬದುಕು ಮನೆ || ಮಾಳಿಗೆ ಮನೆಯೆಂದು ನೆಚ್ಚಿ ಕೆಡಲಿಬೇಡ ಕೇಳಯ್ಯ ಹರಿಕಥೆ ಶ್ರವಣಂಗಳ | ನಾಳೆ ಯಮದೂತರು ಬಂದಳೆದೊಯ್ವಾಗ ಮಾಳಿಗೆ ಮನೆಯು ಸಂಗಡ ಬಾರದಯ್ಯ || ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ ಕಡುಗೊಬ್ಬುತನದಲಿ ನಡೆಯದಿರು | ಒಡೆಯ ಶ್ರೀ ಪುರಂದರವಿಟ್ಠಲನ ಚರಣವ ದೃಢಭಕ್ತಿಯಲಿ ನೀ ಭಜಿಸೆಲೊ ಮನುಜನೆ ||

Thoughts & Reflections

0

No reflections shared yet. Be the first to share your thoughts!

Share your thought