Bhasaka
← Back to home

ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ

Author: ಕನಕದಾಸCategory: ಇತರೆRaaga: ಕೇದಾರಗೌಳTaala: ಝಂಪೆತಾಳ
ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ ಸಜ್ಜನರ ಸಂಗದೊಳಗಿರಿಸೆನ್ನ ರಂಗ ||ಪ|| ಉಂಡಮನೆಗೆರಡನು ಎಣಿಸುವಾತನ ಸಂಗ ಕೊಂಡೆಯವ ಪೇಳಿ ಕಾದಿಸುವನ ಸಂಗ ತಂದೆ ತಾಯನು ಬೈದು ಬಾಧಿಸುವವನ ಸಂಗ ನಿಂದಕರ ಸಂಗ ಬಹು ಭಂಗ ರಂಗ ||1|| ನಂಬಿದ ಠಾವಿನಲಿ ಕೇಡನೆಣಿಪನ ಸಂಗ ಸಂಭ್ರಮದಿ ಜಗಳ ಕಾಯುವನ ಸಂಗ ಹಂಬಲಿಸಿ ಭವದ ಸುಖ ಮೆಚ್ಚಿದಾತನ ಸಂಗ ರಂಭೆಯರ ನೋಡಿ ಮೋಹಿಪನ ಸಂಗ ||2|| ಕುಳಿತ ಸಭೆಯೊಳು ಕುಹಕ ಮಾಡುವಾತನ ಸಂಗ ಬಲು ಬೇಡೆ ಕೊಡದಿರುವ ಲೋಭಿ ಸಂಗ ಕುಲಹೀನರ ಕೂಡೆ ಸ್ನೇಹ ಬೆಳಿಪನ ಸಂಗ ಹಲವು ಮಾತಾಡಿ ಆಚರಿಸದವನ ಸಂಗ ||3|| ಗುರುಸತಿಗೆ ಪರಸತಿಗೆ ಎರಡು ಎಣಿಪನ ಸಂಗ ಗುರುನಿಂದೆ ಪರನಿಂದೆ ಮಾಡುವನ ಸಂಗ ಪರಹಿತಾರ್ಥದ ಧರ್ಮ ಪಡೆಯದಾತನ ಸಂಗ ಪರಮಪಾಮರ ಸಂಗ ಬಹುಭಂಗ ರಂಗ ||4|| ಆಗಮ ಮಹಾತ್ಮೆಯನು ಅರಿಯದಾತನ ಸಂಗ ಯೋಗಿಜನ ಗುರುಗಳನು ನಿಂದಿಪನ ಸಂಗ ರಾಗದ್ವೇಷಾದಿಯಲಿ ಮುಳುಗೇಳುವನ ಸಂಗ ಕಾಗಿನೆಲೆಯಾದಿಕೇಶವ ಬಿಡಿಸು ಈ ಭಂಗ ||5||

Thoughts & Reflections

0

No reflections shared yet. Be the first to share your thoughts!

Share your thought