Bhasaka
← Back to home

ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ

Author: ಕನಕದಾಸCategory: ಇತರೆRaaga: ಮುಖಾರಿTaala: ಝಂಪೆತಾಳ
ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ ||ಪ|| ಕೂಡಿದೆಡೆಯಲಿ ಕಪಟವೆಸಗುವನೆ ದ್ರೋಹಿ ಮಾಡಿದುಪಕಾರವನು ಮರೆವವನೆ ದ್ರೋಹಿ ಚಾಡಿ ಕೊಂಡೆಗಳನಾಡಿ ನಡೆವವನೆ ದ್ರೋಹಿ ರೂಢಿಯೊಳು ಬಾಳುವರ ಸಹಿಸದವನೆ ದ್ರೋಹಿ ||1|| ಸತಿಯಿದ್ದು ಪರಸತಿಯ ಬಯಸುವನೆ ದ್ರೋಹಿ ಹೆತ್ತವರೊಡನೆ ಕಲಹ ಮಾಡುವನೆ ದ್ರೋಹಿ ಯತಿಗಳನು ಒಂದೆ ಸಮ ನಿಂದಿಸುವನೆ ದ್ರೋಹಿ ಸತಿಯನ್ನು ಪರರ ವಶ ಗೈವವನೆ ದ್ರೋಹಿ ||2|| ಹೊನ್ನಿದ್ದು ಅನ್ನದಾನ ಮಾಡದವನೆ ದ್ರೋಹಿ ತನ್ನ ಗುರು ಸತಿಯ ಬಯಸುವವನೇ ದ್ರೋಹಿ ಸನ್ನುತಾಂಗ ಕಾಗಿನೆಲೆಯಾದಿಕೆಶವನ ತನ್ನೊಳಗೆ ತಾ ತಿಳಿದು ಸುಖಿಸದವನೆ ದ್ರೋಹಿ ||3||

Thoughts & Reflections

0

No reflections shared yet. Be the first to share your thoughts!

Share your thought