Bhasaka
← Back to home

ನಂಬಬೇಡಿ ಸಿರಿಯ ತನ್ನದೆ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಝಂಪೆತಾಳ
ನಂಬಬೇಡಿ ಸಿರಿಯ ತನ್ನದೆ? ನಂಬಬೇಡಿ ಸಿರಿಯು ತನ್ನ ದೆಂಬ ನಿಮಿಷದೊಳಗೇನಹುದೊ ಡಂಬತನವಿದೇಕೆ ಹರಿಯ ಪಾ- ದಾಂಬುಜವನು ಭಜಿಸಿ ನರರು ಜಲಧಿಯನ್ನು ಪೀರ್ದ ಮುನಿಯ ಜನನಿ ಪೆಸರ್ಗೆ ಕಿವಿಯನಾಂತ ಖಳನ ಬಲವ ನಂಬಲಾತು ತಲೆಯ ತವಿಸಿದವನ ಸಿರಿಯು ಗಳಿಗೆಯೊಳಗೆ ಕೀಲು ಸಡಿಲದೆ - ಎಣಿಕೆ ಇಲ್ಲದ ದಳವು ಯಮನನಗರಿಗೈದದೆ - ದೈವಕೃಪೆಯು ತೊಲಗಲೊಡನೆ ದಾಳಿವರಿಯದೆ - ಕೇಳಿ ಜನರೆ ||1|| ಅಂಧರಾಯನಾತ್ಮಜರು ಮ- ದಾಂಧರಾಗಿ ಮಲೆತು ಗೋತ್ರ ಬಂಧುಗಳನು ಲೆಕ್ಕಿಸದೆ ಇಭ ಪುರಿಯನಾಳಿದ ನೃಪತಿ ಕೌರ ವೇಂದ್ರನರಸುತನವು ತೊಡೆಯದೆ - ಸಕಲ ಸೈನ್ಯ ಬಂಧು ಬಳಗ ರಣದಿ ಮಡಿಯದೆ - ಶೌರಿ ಮುನಿಯ ಲಂದು ಅವನ ಪದವು ಮುರಿಯದೆ - ಕೇಳಿ ಜನರೆ ||2|| ಧರಣಿಯ ಮುನ್ನಾಳ್ದ ನಹುಷ ಸಗರರೆನಿಪ ಭೂಪತಿಗಳು ಸಿರಿಯ ಜಯಿಸಲಿಲ್ಲ - ಮಿಕ್ಕ ನರರ ಪಾಡಿದೇನು ನೀವು ಬರಿದೆ ಭ್ರಾಂತರಾಗಬೇಡಿರೊ - ಎಂದಿಗಾದರು ಸ್ಥಿರವಿದಲ್ಲವೆಂದು ತಿಳಿಯಿರೊ - ಶ್ರೀ ಕಾಗಿನೆಲೆಯ ವರದ ಕೇಶವನನು ಭಜಿಸಿರೊ - ಕೇಳಿ ಜನರೆ ||3||

Thoughts & Reflections

0

No reflections shared yet. Be the first to share your thoughts!

Share your thought