Bhasaka
← Back to home

ನಂಬು ನಾರಾಯಣನ ನಂಬೋ ನರಹರಿಯ

Author: ಕನಕದಾಸCategory: ಶ್ರೀಕೃಷ್ಣRaaga: ನಾಟಿTaala: ಝಂಪೆತಾಳ
ನಂಬು ನಾರಾಯಣನ ನಂಬೊ ನರಹರಿಯ ನಂಬಿದಾ ಭಕ್ತರ ಕುಟುಂಬ ಸಾರಥಿಯ ||ಪ|| ಬಲಿನಂಬಿ ಪಾತಾಳಲೋಕಕರಸಾದನದೆ ಕುಲದ ಪ್ರಹ್ಲಾದನು ನಿಜವ ಕಂಡ ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ ಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ ||1|| ಅಂಬರೀಷನು ನಂಬಿ ವೈಕುಂಠವೇರಿದನು ಹಂಬಲಿಸಿ ಶಶಿಧರನು ಉರಿಯ ಗೆದ್ದ ಕುಂಭಿನೀದೇವಿ ತಾ ಬಂಧನವ ಕಳೆದಳು ಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು ||2|| ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನು ಮತಿ ಭ್ರಷ್ಟ ಅಜಮಿಳನ ಉದ್ಧರಿಸಿದನು ಕ್ಷಿತಿಯೊಳಗೆ ಕಾಗಿನೆಲೆಯಾದಿಕೇಶವರಾಯ ಪತಿತ ಪಾವನ ಪರಮಪುರುಷೋತ್ತಮನನು ||3||

Thoughts & Reflections

0

No reflections shared yet. Be the first to share your thoughts!

Share your thought