Bhasaka
← Back to home

ನನ್ನವ್ವ ಕಲ್ಲುಬಿಡೆ ಈ ಧ್ರೋತ್ರವ

Author: ಕನಕದಾಸCategory: ಶ್ರೀಕೃಷ್ಣRaaga: ಕಲ್ಯಾಣೀTaala: ಆದಿತಾಳ
ನನ್ನವ್ವ ಕಲ್ಲುಬಿಡೆ ಈ ಧ್ರೋತ್ರವ ಚೆನ್ನಾಗಿ ಒಗೆಯಬೇಕು ||ಪ|| ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಗೆ ಚೆನ್ನಕೇಶವನ ಪ್ರಸಾದಕ್ಕೊದಗಬೇಕು ||ಅ|| ಉಟ್ಟ ಧೋತ್ರವು ಮಾಸಿತು- ಮನದೊಳಗಿರುವ ದುಷ್ಟರೈವರುಗಳಿಂದ ಕಷ್ಟದುರಿತಗಳು ಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳು ಗಟ್ಯಾಗಿ ಒಗೆಯಬೇಕು ||1|| ವೇದವನೋದಬೇಕು ಮನದೊಳಗಿದ್ದ ಭೇದವ ಕಳೆಯಬೇಕು ಸಾದರಣೆಯಿಂದ ತಿಳಿದು ನಿಶ್ಚಯವಾಗಿ ಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ ||2|| ವೇಲಾಪುರದ ಚೆನ್ನಕೇಶವನ ಸೇವೆಗೆ ಆಲಸ್ಯವನು ಮಾಡದೆ ಕೋಲ ಹಿಡಿದು ದ್ವಾರಪಾಲಕನಾಗುವೆ ನೀಲ ಕುಂತಳೆ ಕಲ್ಲ ಬಿಟ್ಟು ಆ ಕಡೆ ಸಾರೆ ||3||

Thoughts & Reflections

0

No reflections shared yet. Be the first to share your thoughts!

Share your thought