Bhasaka
← Back to home

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

Author: ಕನಕದಾಸCategory: ಶ್ರೀಕೃಷ್ಣ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿನಿಮ್ಮೊಳಗಿಹನ್ಯಾರಮ್ಮ ಕಮ್ಮಗೋಲನ ವೈರಿಸುತನಾದ ಸೊಂಡಿಲಹೆಮ್ಮೈಯ್ಯ ಗಣನಾಥನೆ ಅಮ್ಮಯ್ಯ ಮೋರೆ ಕಪ್ಪಿನ ಭಾವ ಮೊರದಗಲ ಕಿವಿಯುಳ್ಳಕೋರೆ ದಾಡೆಯವನ್ಯಾರಮ್ಮಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನಧೀರ ತಾ ಗಣನಾಥನೆ ಅಮ್ಮಯ್ಯ ||1|| ಉಟ್ಟ ದಟ್ಟಿಯು ಮತ್ತೆ ಬಿಗಿದುಟ್ಟ ಚಲ್ಲಣದದಿಟ್ಟ ತಾನಿವನ್ಯಾರಮ್ಮಪಟ್ಟದ ರಾಣಿ ಪಾರ್ವತಿಯ ಕುಮಾರಹೊಟ್ಟೆಯ ಗಣನಾಥನೆ ಅಮ್ಮಯ್ಯ||2|| ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲಭಾಷಿಗನಿವನ್ಯಾರಮ್ಮಲೇಸಾಗಿ ಸುಜನರ ಸಲಹುವ ನೆಲೆಯಾದಿಕೇಶವನ ದಾಸ ಕಾಣೆ ಅಮ್ಮಯ್ಯ ||3||

Thoughts & Reflections

0

No reflections shared yet. Be the first to share your thoughts!

Share your thought