Bhasaka
← Back to home

ನಾ ನಿಮ್ಮ ದಾಸರ ದಾಸ

Author: ಕನಕದಾಸCategory: ಶ್ರೀಕೃಷ್ಣRaaga: ಕಲ್ಯಾಣೀTaala: ಆಟತಾಳ
ನಾ ನಿಮ್ಮ ದಾಸರ ದಾಸ ಈ ನರರ ಪಾಡೇನೆರಡು ದಿನದ ಸಂಸಾರ ಕರೆಸು ಕಂಬದಿ ಎಂದು ವಾದಿಸಿದವ ಕೆಟ್ಟ ಪರಹೆಣ್ಣಿಗಾಸೆ ಪಟ್ಟು ಕೀಚಕ ಕೆಟ್ಟ ಬರಿದೆ ದ್ರೌಪದಿಗಾಗಿ ದುರ್ಯೋಧನ ಕೆಟ್ಟ ಉರಿ ಹಸ್ತವ ಬೇಡಿ ಭಸ್ಮಾಸುರ ಕೆಟ್ಟ ||1|| ಆಡಿದ ಮಾತಿಗೆ ಬಲಿ ನೀಡಲಾಗಿ ಕೆಟ್ಟ ಮಾಡುವ ದಾನ ತಡೆದು ಶುಕ್ರನು ಕೆಟ್ಟ ಕೂಡಿದ ಶಿರವರಿದು ರೂಢಿಗೀಶ್ವರ ಕೆಟ್ಟ ಬೇಡಲು ಗುಂಡಿಗೆ ಸೀಳಿ ಕರ್ಣನು ಕೆಟ್ಟ ||2|| ಎರಡೆಂಟಾಡೆನೆಂದು ಹರಿಶ್ಚಂದ್ರ ಕೆಟ್ಟ ನೆರೆ ಪಗಡೆಯನಾಡಿ ಧರ್ಮಜನು ಕೆಟ್ಟ ಹರಿದು ಬಾಣವ ತೊಟ್ಟು ದಶರಥನು ಕೆಟ್ಟ ಹರಿಯ ಮೊರೆ ಸೇರಿದರ್ಗೆ ಸ್ಥಿರ ಪಟ್ಟ ||3|| ಹಮ್ಮನಾಡಿ ಮುನ್ನ ಬ್ರಹ್ಮ ತಾ ಕೆಟ್ಟ ಅಮ್ಮನ ನುಡಿ ಕೇಳದೆ ಹನುಮಂತ ಕೆಟ್ಟ ತಮ್ಮನ ನುಡಿ ಕೇಳದೆ ರಾವಣನು ಕೆಟ್ಟ ನಿಮ್ಮ ನೋಯಿಸಿದ ಮೈರಾವಣನು ಕೆಟ್ಟ ||4|| ಭಾಗೀರಥಿಯ ತಂದೆ ಬಹುದೈತ್ಯರ ಕೊಂದೆ ಭೋಗಿಶಯನ ಶ್ರೀ ಲಕ್ಷ್ಮೀಕಾಂತನೆ ಭಾಗವತ ಪ್ರಿಯ ಭವಭಯಹರ ಕಾಗಿನೆಲೆಯಾದಿಕೇಶವಗೆ ನಮೊ ನಮೋ ||5||

Thoughts & Reflections

0

No reflections shared yet. Be the first to share your thoughts!

Share your thought