Bhasaka
← Back to home

ನಾನು ನೀನು ಎನ್ನದಿರು ಹೀನ ಮಾನವ

Author: ಕನಕದಾಸCategory: ವೈರಾಗ್ಯRaaga: ಪೀಲೂTaala: ಮುಟ್ಟೆತಾಳ
ನಾನು ನೀನು ಎನ್ನದಿರು ಹೀನ ಮಾನವ ||ಪ|| ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ||ಅ|| ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನಲೊ ಅನ್ನದಿಂದ ಬಂದ ಕಾಮ ನಿನ್ನದೇನೆಲೊ ಕರ್ಣದಿಂದ ಬರುವ ಘೋಷ ನಿನ್ನದೇನೆಲೊ ನಿನ್ನ ಬಿಟ್ಟು ಹೋಹ ದೇಹ ನಿನ್ನದೇನಲೊ ||1|| ಹಲವು ಜನ್ಮದಿಂದ ಬಂದಿರುವನು ನೀನೆಲೊ ಮಲದ ಗರ್ಭದಲಿ ನಿಂದಿರುವನು ನೀನೆಲೊ ಜಲದ ದಾರಿಯಲಿ ಬಂದಿರುವನು ನೀನೆಲೊ ಕುಲವು ಜಾತಿ ಗೋತ್ರವುಳ್ಳವನು ನೀನೆಲೊ ||2|| ಕಾಲಕರ್ಮ ಶೀಲನೇಮ ನಿನ್ನದೇನೆಲೊ ಜಾಲವಿದ್ಯೆ ಬಯಲ ಮಾಯೆ ನಿನ್ನದೇನೆಲೊ ಕೀಲು ಜಡಿದ ತೊಗಲಗೊಂಬೆ ನಿನ್ನದೇನೆಲೊ ಲೋಲ ಆದಿಕೆಶವನ ಭಕ್ತನಾಗೆಲೊ ||3||

Thoughts & Reflections

0

No reflections shared yet. Be the first to share your thoughts!

Share your thought