Bhasaka
← Back to home

ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನು

Author: ಕನಕದಾಸCategory: ಶ್ರೀಕೃಷ್ಣRaaga: ಪಂತುವರಾಳಿ
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನು ಏನೆಂದು ಸ್ತುತಿ ಮಾಡಲರಿಯೆ ಹರಿ ಮುಕುಂದನು ನೀನು ನರಜನ್ಮ ಹುಳು ನಾನು ಪರಮಪುರುಷನು ನೀನು ಪಾಪಿ ನಾನು ಗರುಡ ಗಮನನು ನೀನು ದುರುಳ ಕರ್ಮಿಯು ನಾನು ಪರಂಜ್ಯೋತಿಯು ನೀನು ಪಾಮರನು ನಾನು ||1|| ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನು ಕ್ಷಣಕ್ಷಣಕೆ ಅವಗುಣದ ಕರ್ಮಿ ನಾನು ವನಜಸಂಭವನಯ್ಯ ವೈಕುಂಠಪತಿ ನೀನು ತನುವು ಸ್ಥಿರವಲ್ಲದ ನರಬೊಂಬೆ ನಾನು ||2|| ಕಂಬದಲಿ ಬಂದಂಥ ಆನಂದಪತಿ ನೀನು ನಂಬಿಗಿಲ್ಲದ ನಿರ್ಜೀವಿ ನಾನು ಅಂಬರೀಷಗೆ ಒಲಿದ ದುರಿತ ದೂರನು ನೀನು ಡಂಬಕದ ಮಾಯಾ ಶರೀರಿ ನಾನು ||3|| ವಾರಿಧಿಶಯನ ಭೂರಿ ಕಾರುಣ್ಯಪತಿ ನೀನು ಘೋರತರ ಕಾಮಕ್ರೋಧಿಯು ನಾನು ಈರೇಳು ಲೋಕವನು ಪೊಡೆಯಲಿಟ್ಟವ ನೀನು ಸಾರಿ ಭಜಿಸದ ದುಷ್ಟ ಕರ್ಮಿ ನಾನು ||4|| ತಿರುಪತಿಯೊಳು ನೆಲಸಿದ ವೆಂಕಟೇಶನು ನೀನು ಚರಣಕೆರಗುವ ಕನಕದಾಸನು ನಾನು ಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ ||5||

Thoughts & Reflections

0

No reflections shared yet. Be the first to share your thoughts!

Share your thought