Bhasaka
← Back to home

ನಾರಾಯಣ ನಿನ್ನ ನಾಮವೊಂದಿರುತಿರೆ

Author: ಕನಕದಾಸCategory: ಶ್ರೀಕೃಷ್ಣRaaga: ಆರಭಿTaala: ಆಟತಾಳ
ನಾರಾಯಣ ನಿನ್ನ ನಾಮವೊಂದಿರುತಿರೆ ಬೇರೊಂದು ನಾಮವಿನ್ನ್ಯಾಕಯ್ಯ ||ಪ|| ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆ ಬೆಟ್ಟವ ಬಳಸಲಿನ್ನ್ಯಾಕಯ್ಯ ಅಷ್ಟೈಶ್ವರ್ಯದ ಮೃಷ್ಟಾನ್ನವಿರುತಿರೆ ಬಿಟ್ಟಿಕೂಳನು ತಿನ್ನಲ್ಯಾಕಯ್ಯ ||1|| ಪರುಶದ ಪಾಳಗಳಿರುತಿರೆ ಬೀದಿ ಜರಿಗಲ್ಲ ತೊಳೆಯಲಿನ್ಯಾಕಯ್ಯ ಹರಿವಾಣದೊಳಗಮೃತಾನ್ನವಿರುತಿರೆ ತಿರುಪೆಕೂಳನು ತಿನ್ನಲ್ಯಾಕಯ್ಯ ||2|| ಬೆಲ್ಲವು ಕರದೊಳಗಿರುತಿರೆ ಕಾಡ ಕಲ್ಲನು ಕಡಿಯಲಿನ್ನ್ಯಾಕಯ್ಯ ಬಲ್ಲಿದ ನೆಲೆಯಾದಿಕೇಶವನಿರುತಿರೆ ಚಿಲ್ಲರೆ ದೈವದ ಹಂಬಲ್ಯಾಕಯ್ಯ ||3||

Thoughts & Reflections

0

No reflections shared yet. Be the first to share your thoughts!

Share your thought