Bhasaka
← Back to home

ಜಯ ವಿವೇಕಾನಂದ

Author: ಸ್ವಾಮಿ ಶಾಸ್ತ್ರಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಅಢಾಣಾTaala: ತೇವರಾ
ಜಯ ವಿವೇಕಾನಂದ ಗುರುವರ ಭುವನಮಂಗಲಕಾರಿ | ಚಿರಸಮಾಧಿಯ ಗಿರಿಶಿಖರದಿಂ ನರರ ಸೇವೆಗೆ ಇಳಿದ ನರವರ || ಸುಪ್ತ ದೈವರೆ ಏಳಿರೇಳಿ ಲುಪ್ತಪದವಿಯ ಮರಳಿ ತಾಳಿ | ಸಪ್ತ ಭುವಿಗಳ ಆಳಿರೆನುತ ದೀಪ್ತವಾಣಿಯ ಜಗದಿ ಮೊಳಗಿಹೆ || ವಿಶ್ವವ್ಯಾಪಕ ಪ್ರೇಮಮೂರ್ತಿಯೇ ವಿಶ್ವದ್ಯೋತಕ ಪರಮಜ್ಞಾನಿಯೇ | ವಿಶ್ವಮುಕ್ತಿ ಸಮರ್ಪಿತಾತ್ಮನೆ ವಿಶ್ವವಂದ್ಯನೆ ಜಯತು ಜಯತು ||

Thoughts & Reflections

0

No reflections shared yet. Be the first to share your thoughts!

Share your thought