Bhasaka
← Back to home

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ

Author: ಕನಕದಾಸCategory: ಶ್ರೀಮಹಾಲಕ್ಷ್ಮಿRaaga: ಶಂಕರಾಭರಣTaala: ಛಾಪುತಾಳ
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ ||ಪ|| ನಿನಗಿಂತ ಕುಂದೇನೊ ಸನಕಾದಿಗಳ ಸ್ವಾಮಿ ಮನಸಿಜನೊಡೆಯನೆ ಕನಕಗರ್ಭನ ಜನಕ ||ಅ|| ಮಚ್ಚ್ಯಾವತಾರ ನೀನಾದರೆ- ಆಕೆ ಮಚ್ಚ್ಯಗಂಗಳೆ ತಾನಾದಳೊ ಹೆಚ್ಚಿನ ಶಂಖವ ಪಿಡಿದರೆ- ಆಕೆ ನಿಚ್ಚ ಶಂಖಕಂಠಳಾದಳಯ್ಯ| |1|| ನೀಲವರ್ಣ ನೀನಾದರೆ- ಆಕೆ ನೀಲಕುಂತಳೆ ತಾನಾದಳೊ ಲೋಲ ಕಮಲನಾಭನಾದರೆ- ಆಕೆ ಬಾಲ ಕಮಲಮುಖಿಯಾದಳಯ್ಯ||2|| ಬೆಟ್ಟವ ನೀನೊಂದು ಪೊತ್ತರೆ- ಆಕೆ ಬೆಟ್ಟದಂಥ ಕುಚವೆರಡು ಪೊತ್ತಳೊ ಮೆಟ್ಟಿ ಶೇಷನ ನೀ ತುಳಿದರೆ- ಆಕೆ ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ ||3|| ಗಜರಾಜವರದ ನೀನಾದರೆ- ಆಕೆ ಗಜಗಮನೆಯು ತಾನಾದಳಯ್ಯ ನಿಜ ನರಸಿಂಹ ನೀನಾದರೆ- ಆಕೆ ಭಜಿಸಿ ಸಿಂಹಮಧ್ಯೆಯಾದಳಯ್ಯ ||4|| ಈ ಪರಿಯೊಳು ನೀನು ಜನಿಸಿದೆ- ಭಲೆ ಭಾಪುರೆ ಬಾಡದೊಳು ನೆಲೆಸಿದೆ ಗೋಪಿಯರ ಮೋಹ ಸಲಿಸಿದೆ- ಚೆಲುವ ಶ್ರೀಪತಿ ಆದಿಕೇಶವರಾಯ ಮೆರೆದೆ ||5||

Thoughts & Reflections

0

No reflections shared yet. Be the first to share your thoughts!

Share your thought