Bhasaka
← Back to home

ನಿನ್ನ ನಾನೇನೆಂದೆನೊ - ರಂಗಯ್ಯ

Author: ಕನಕದಾಸCategory: ಶ್ರೀಕೃಷ್ಣRaaga: ಆನಂದ ಭೈರವಿTaala: ಆಟತಾಳ
ನಿನ್ನ ನಾನೇನೆಂದೆನೊ- ರಂಗಯ್ಯ ರಂಗ ನಿನ್ನ ನಾನೇಂದೆನೊ ||ಪ|| ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ ಪನ್ನಗಶಯನ ಪಾಲ್ಗಡಲೊಡೆಯನೆ ರಂಗ ||ಅ|| ಧೀರ ಸೋಮಕ ವೇದಚೋರ ಖಳನನು ಸೀಳಿ ವಾರಿಧಿಗಿಳಿದು ಪರ್ವತವನೆತ್ತಿ ಧಾರಿಣಿಯನು ಕದ್ದ ದನುಜದಲ್ಲಣನಾದ ನಾರಸಿಂಹ ನಿನಗೆ ನಮೊ ಎಂದೆನಲ್ಲದೆ ನೀರ ಪೊಕ್ಕವನೆಂದೆನೆ- ಬೆನ್ನಲಿ ಘನ್ನ ಭಾರ ಪೊತ್ತವನೆಂದೆನೆ- ಮಣ್ಣನಗೆದು ಬೇರ ಮೆದ್ದವನೆಂದೆನೆ- ರಕ್ಕಸನೊಳು ಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ ||1|| ಧರೆಯ ದಾನವ ಬೇಡಿ ನೆಲನ ಈರಡಿ ಮಾಡಿ ಪರಶು ಪಿಡಿದು ಕ್ಷತ್ರಿಯರ ಸವರಿ ಚರಣದಿ ಪಾಷಾಣ ಪೆಣ್ಣು ಮಾಡಿ ಪೂತನಿಯ ಕೊಂದ ಯಾದವ ಪತಿ ಶರಣೆಂದೆನಲ್ಲದೆ ತಿರುಕ ಹಾರುವನೆಂದೆನೆ- ಹೆತ್ತ ತಾಯ ಶಿರವ ತರಿದನೆಂದೆನೆ- ವನವಾಸಕೆ ಭರದಿ ಚರಿಸಿದನೆಂದೆನೆ- ಪೂತನಿಯನು ಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ ||2|| ಚಿತ್ತಜಕೋಟಿ ಲಾವಣ್ಯ ಮುಪ್ಪುರದ ಉತ್ತಮಸ್ತ್ರೀಯರ ವ್ರತವಳಿದು ಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದ ಹತ್ತವತಾರದ ಹರಿಯೆಂದೆನಲ್ಲದೆ ಬತ್ತಲೆ ನಿಂತವನೆಂದೆನೆ- ತೇಜಿಯನೇರಿ ಒತ್ತಿ ನಡೆದವನೆಂದೆನೆ- ಬಾರಿಬಾರಿಗೆ ಸತ್ತು ಹುಟ್ಟುವನೆಂದೆನೆ- ಆದಿಕೇಶವ ಭಕ್ತವತ್ಸಲನೆಂದು ಪೊಗಳಿದೆನಲ್ಲದೆ ||3||

Thoughts & Reflections

0

No reflections shared yet. Be the first to share your thoughts!

Share your thought