Bhasaka
← Back to home

ನಿನ್ನ ನೋಡಿ ಧನ್ಯನಾದೆನೊ ಹರಿ

Author: ಕನಕದಾಸCategory: ಶ್ರೀಕೃಷ್ಣRaaga: ಆನಂದ ಭೈರವಿTaala: ರೂಪಕತಾಳ
ನಿನ್ನ ನೋಡಿ ಧನ್ಯನಾದೆನೊ ಹರಿ ಶ್ರೀನಿವಾಸ ನಿನ್ನ ನೋಡಿ ಧನ್ಯನಾದೆ ಎನ್ನ ಮನಸು ನಯನ ಸುಪ್ರ ಸನ್ನವಾಯಿತು ದಯವ ಮಾಡಿ ಮುನ್ನ ಸಲಹಬೇಕು ಸ್ವಾಮಿ ಪಕ್ಷಿವಾಹನ ಲಕ್ಷ್ಮೀರಮಣ ರಾಕ್ಷಸಾಂತಕ ಯದುಕುಲಾನ್ವಯ ಕುಕ್ಷಿಯೊಳು ಬ್ರಹ್ಮಾಂಡ ತಂಡವ ರಕ್ಷಿಸುತಲಿಹ ಸುಜನ ಪಕ್ಷಾ ||1|| ದೇಶದೇಶ ತಿರುಗಿ ನಾನು ಆಶೆಭರಿತನಾದೆ ಸ್ವಾಮಿ ವಾಸಿ ನಿಮಗೆ ಸಲಹುವುದು ಜಗ ದೀಶ ಕಾಯೋ ವಾಸುದೇವ ||2|| ಕಂತು ಜನಕ ಎನ್ನ ಮೊರೆಯ- ನಾಂತು ವಿಹಿತದಿಂದ ಸೇವೆ ಅಂತರವಿಲ್ಲದೆ ದಯಪಾಲಿಸೊ ಶಾಂತ ಮೂರ್ತಿಯಾದಿ ಕೇಶವ ಮುದ್ದು ವಿಠಲ ||3||

Thoughts & Reflections

0

No reflections shared yet. Be the first to share your thoughts!

Share your thought