Bhasaka
← Back to home

ನೀನುಪೇಕ್ಷೆಯ ಮಾಡೆ

Author: ಕನಕದಾಸCategory: ಶ್ರೀಕೃಷ್ಣRaaga: ಕೇದಾರಗೌಳTaala: ಝಂಪೆತಾಳ
ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆ ನಿಗಮಗೋಚರ ಮುಕುಂದ ||ಪ|| ಗಾನರಸಲೋಲ ಆಗಮಶೀಲ ಭಕ್ತಪರಿಪಾಲ ಸನ್ನುತ ಗೋಪಾಲ ಬಾಲ ||ಅ|| ಜಪತಪಾನುಷ್ಠಾನ ಜಪಿತನೆಂದೆನಿಸುವೆನೆ ಅಪ್ಪ ಜಾಣತನವೆನ್ನೊಳಿಲ್ಲ ಗುಪಿತದಿಂದ ದಾನ ಧರ್ಮವನು ನಾ ಮಾಡುವೆನೆ ಅಪರಿಮಿತ ಧನವು ಇಲ್ಲ ಅಪಾರ ಕರ್ಮಗಳ ಅನುಸರಿಸಿ ನಡೆವುದಕೆ ನಿಪುಣತ್ವ ಮೊದಲೆ ಇಲ್ಲ ರಪಣ ನಿಪುಣತ್ವ ಜಾಣತ್ವ ಇಲ್ಲದಿಹ ಕೃಪಣಗೆ ಸುಪವಿತ್ರ ನೀನಲ್ಲದೆ ಇಲ್ಲ -ಸಿರಿನಲ್ಲ ||1|| ಆನೆ ನೆಗಳಿಗೆ ಸಿಲುಕಿ ಅರೆಬಾಯಿ ಬಿಡುತಿರಲು ಮೌನದಿಂ ಬಂದು ಕಾಯ್ದೆ ಹೇ ನಾರಗಾ ಎಂದಜಮಿಳಗೆ ಮುಕ್ತಿಯನು ನೀನೊಲಿದು ಕೃಪೆ ಮಾಡಿದೆ ಹಾನಿಯಿಲ್ಲದ ಪದವಿ ನೀನಿತ್ತು ಧ್ರುವಗೆ ಕಡು ದೀನತ್ವವನು ಬಿಡಿಸಿದೆ ದಾನವಾಂತಕ ಸಕಲ ದಿವಿಜ ಮುನಿವಂದ್ಯ ಅಭಿ ಮಾನಿ ಎನ್ನನೂ ಸಲಹದೆ - ಬರಿದೆ ||2|| ಈಶಣತ್ರಯದ ಬಯಲಾಸೆಯಲಿ ಭ್ರಮೆಗೊಂಡು ಬೇಸರದಿ ಮನದಿ ನೊಂದು ಹೇಸಿಗೆಯ ಸಂಸಾರ ಮಾಯಕ್ಕೆ ಸಿಲುಕಿ ನಾ ಘಾಸಿ ಪಡಲಾರೆನಿಂದು ವಾಸುದೇವನೆ ನಿನ್ನ ಪೊಂದಿ ಬದುಕುವೆನೆಂದು ಆಸೆ ಪಡುತಿಹೆನು ಇಂದು ದಾಸನೆಂದೆನಿಸಿ ಡಂಗುರ ಹೊಯ್ಸಿ ಬಡದಾದಿ ಕೇಶವನೆ ಕರುಣಿಸಯ್ಯಾ ಬಂದು ||3||

Thoughts & Reflections

0

No reflections shared yet. Be the first to share your thoughts!

Share your thought