Bhasaka
← Back to home

ನೀನೇನು ಮಾಡಲಾಪೆ

Author: ಕನಕದಾಸCategory: ಶ್ರೀಕೃಷ್ಣRaaga: ಪಂತುವರಾಳಿTaala: ಛಾಪುತಾಳ
ನೀನೇನು ಮಾಡಲಾಪೆ ನಾನು ಮುನ್ನ ಜನ್ಮ ಪಡೆದಲ್ಲದೆ ರಂಗ ||ಪ|| ನಾನಾ ಜನುಮದಿ ಬಹು ಯೋನಿ ಮುಖದಲಿ ಬಾಹ ಹೀನತ್ವವನು ನೀನು ಕಳೆಯಲಾಪೆಯ ನಾನು ನನ್ನದು ಎಂಬ ಅಹಂಕಾರವಿರೆ ನಿನ್ನ ಧ್ಯಾನಿಸಲು ಬುದ್ಧಿಯ ಕೊಡಲಾಪೆಯ ||1|| ಸಂಚಿತವಾಗಿರುವ ಪ್ರಾರಬ್ಧದೊಳಗೊಂದು ಕಿಂಚಿತಾದರು ನೀನು ಕಳೆಯಲಾಪೆಯ ಪಂಚೇಂದ್ರಿಯಂಗಳು ದೆಸೆದೆಸೆಗೆ ಎಳೆವಾಗ ವಂಚನೆ ಇಲ್ಲದೆ ನೀನಡ್ಡ ಬರಲಾಪೆಯ ||2|| ಸರಸಿಜೋದ್ಭವಗೆ ಬುದ್ಧಿಯ ಪೇಳಿ ಪಣೆಯೊಳು ಬರೆದ ಬರೆಹವನು ನೀನು ತೊಡೆಯಲಾಪೆಯ ಪರಬ್ರಹ್ಮ ಕಾಗಿನೆಲೆಯಾದಿಕೇಶವ ನಿನ್ನ ಸ್ಮರಣೆಗೆಯ್ಯಲು ಕಾಯದಿರಲಾಪೆಯ ||3||

Thoughts & Reflections

0

No reflections shared yet. Be the first to share your thoughts!

Share your thought