Bhasaka
← Back to home

ನೆನೆಯ ಬಾರದೆ ಮನವೆ ಪರಮಪಾವನನ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಆಟತಾಳ
ನೆನೆಯ ಬಾರದೆ ಮನವೆ ಪರಮಪಾವನನ ||ಪ|| ಸಾಕಾರದಿಂದ ಸರ್ವರನು ರಕ್ಷಿಪನ ಜೋಕೆಯಲಿ ತನ್ನ ನೆನೆವವರ ಪಾಲಿಪನ- ಆ ನೇಕ ಮೂರುತಿ ಸೂರ್ಯನಾರಾಯಣನ ||1|| ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನ ಒಮ್ಮೆ ನೆನೆಯಲು ಪ್ರಸನ್ನನಾದವನ ಧರ್ಮಕ್ಕೆ ಸಾಕ್ಷಾತ್ ರೂಪಾಗಿ ತೋರುವನ ನಿರ್ಮಲಾತ್ಮಕವಾಗಿ ಥಳಥಳಿಸುವವನ ||2|| ಹರಗೆ ನಯನವಾಗಿ ಮಕುಟವ ಬೆಳಗುವನ ತರುಣಿಯೈವರ ಲಜ್ಜೆ ಕಾಯ್ದವನ ದುರಿತಕೋಟಿಗಳನುದ್ಧರಿಸುವವನ ಪರಬ್ರಹ್ಮ ಕಾಗಿನೆಲೆಯಾದಿಕೇಶವನ ಮರೆಯದೆ ಭಜಿಪರ ಕಾಯುವವನ ||3||

Thoughts & Reflections

0

No reflections shared yet. Be the first to share your thoughts!

Share your thought